ಹೊರಟೆ....

ಹೊರಟೆ ಹೊರ ಹೋಗುವುದಕಲ್ಲ
ಹೊಳಗಿನ ಹುಡುಕಾಟಕ್ಕೆ.

ಹೊರಟೆ ಕಂಡಡಿಯುವುದಕಲ್ಲ
ಕಂಡಿದ್ದು ಕಂಡುಕೊಳಲು.

ಹೊರಟೆ ಕಾಸನ್ನು ಕಾಣುವುದಕಲ್ಲ
ಕಾಸಿನ ಬದಲು ಕೆಲಸಕ್ಕೆ.

ಹೊರಟೆ ಒನವಾಸಕಲ್ಲ
ಒನದ ಬನವ ಕಾಣಲು.

ಹೊರಟೆ ಹಸಿದವರ ಕಾಣುವುದಕಲ್ಲ
ಹಸಿವಿಗೆ ಅನ್ನನಿಡಲು.

ಹೊರಟೆ ನೊಂದವರ ನೋಡವುದಕಲ್ಲ
ನೋವನ್ನು ನಿವಾರಿಸಲು.

ಹೊರಟೆ ಪ್ರಸಿದ್ಧಿ ಪಡೆಯುವುದಕಲ್ಲ
ಪ್ರಸಿದ್ಧಿಯ ಹಿಂದಿನ ಶ್ರಮ ಓಡುವುದಕ್ಕೆ.

ಹೊರಟೆ ಸಾವು ನೋಡುವುದಕಲ್ಲ
ಸಾವಿನ ಸತ್ಯ ನೋಡುವುದಕ್ಕೆ.

-- ಈಶ,ಎಂ.ಸಿ.ಹಳ್ಳಿ.

- ಈಶ

08 Dec 2016, 03:47 pm
Download App from Playstore: