ಚೇತನ

ಆತ್ಮವಂತರ್ಗತವು
ಕೋಶ ಕೋಶಗಳಲ್ಲು
ಅಣು ರೇಣು ತೃಣ ಕಾಷ್ಟ
ಪರಿಪೂರ್ಣವು

ಜೀವ ನಿರ್ಜೀವದಲು
ಭವಭಾವರೂಪದೊಲು
ಅವಿಭಾಜ್ಯವಾಗಿತಾ
ಪ್ರಕಟಗೊಂಡಿಹುದು

ಕಂಡರೂ ತೋರ್ಗೊಡದೆ
ತೋರಿದರು ತಿಳಿಯದೇ
ಅರಿವಿನಾಳದೆ ಅವಿತ
ಅನುಭೂತಿಯಹುದು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

08 Dec 2016, 10:50 pm
Download App from Playstore: