ಹರಕೆ
ದಿನದ ಕೊನೆಗೀವೆ
ನೀನಿತ್ತ ಖುಷಿ ನಿನಗೆ
ಹಂಚು ಅದನೀನು
ಅದರಗತ್ಯವಿರುವವಗೆ
ಮರಳಿಸೆನು ದುಃಖ
ಬೇಗುದಿ ಬೇಸರವ ಮರಳಿ
ಕೊನೆಯಾಗಲದರ
ಮರುಕಳಿಪ ಸರಪಳಿ
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 04:11 am
Download
App from Playstore: