ಕಂದ ಮತ್ತು ಚಂದ್ರ

ಬಾನಿಗೊಂದು ಏಣಿ ಹಚ್ಚಿ

ಚಂದ್ರನನ್ನೆ ಮುಟ್ಟಿದೆ!

ಸುತ್ತ ಮುತ್ತ ಆಡುತಿರುವ

ಚುಕ್ಕೆ ಬಳಗ ತಟ್ಟಿದೆ  !


ಬಿಸಿಲ ಧಗೆಗೆ ಬೆಂದ ಧರೆಗೆ

ತಂಪು ತರಲು ಕೇಳಿದೆ  !

" ನಿನ್ನ ಹಿಂದೆ ಬಂದು ಬಿಡುವೆ

ಹೊರಡು  ತಿರುಗಿ ನೋಡದೆ  !


- ಎಂದ ಚಂದ್ರ ಬರಲೆ ಇಲ್ಲ

ಎಷ್ಟು ಕಾದ್ರು ಭೂಮಿಗೆ  !

ಮತ್ತೆ ಏಣಿ ಹತ್ತಿ ಹೊರಟೆ

ಕರೆದು ತರಲು ಲಗುಬಗೆ !


ಕಾಲು ಜಾರಿ ಆಯ ತಪ್ಪಿ  

ಕೆಳಗೆ ನಾನು ಬೀಳಲು !

ಏಕೆ ಚೀರಿಕೊಂಡೆ      ಎಂದು

ಅಮ್ಮ ಬಂದು ಕೇಳಲು !


ಕನಸು ಕಂಡೆನೆಂದು ಹೇಳೆ

ಅಪ್ಪಿ ಮುತ್ತು  ಕೊಟ್ಟಳು !

ಎಲ್ಲರೆದರು ಹೇಳಿ ಹೇಳಿ

ಹಾಸ್ಯ ಮಾಡಿ ನಕ್ಕಳು!

- ಚಂದ್ರಗೌಡ ಕುಲಕರ್ಣಿ

09 Dec 2016, 09:52 am
Download App from Playstore: