ನೀ ಬಿಟ್ಟುಹೋದ ಮೇಲೆ
ಮರೆಯೋಣವೆಂದರೂ
ಮರೆಯಾಗುತ್ತಿಲ್ಲ ಆ ನಿನ್ನ
ನೆನಪುಗಳು..
ಕಳೆದುಹೋದ ಆ ದಿನಗಳು
ಬಾರದೇ ಹೋದರೂ ಕಳೆಯಲಾಗದು
ನೀ ತೊರೆದ ದಿನಗಳು..
ಮಣ್ಣಲಿ ಮಣ್ಣಾದರೂ
ಮಾಸುತ್ತಿಲ್ಲ ಮನದಲಿ ನೀ
ಗೀಚಿಹೋದ ನಿನ್ನ ನೆನಪುಗಳು..
ಸತ್ತರೂ ಸುಡುತ್ತಿಲ್ಲ ನೀ
ನೀಡಿಹೋದ ನೆನಪುಗಳೆಂಬ
ಅಳಿಸಲಾಗದ ಗಾಯವ.
ಚೌಡಪ್ಪ ಎನ್ ಆನೇಕಲ್.
- ಚೌಡಪ್ಪ ಎನ್
09 Dec 2016, 12:57 pm
Download App from Playstore: