ವಿರಹ ವೇದನೆ.......

ನಾ ಜೇನಾದರೆ,
ನೀ ಹಾಲಾಗಿ ಒಂದಾಗು
ನಾ ಹಾಲಾದರೆ,
ನೀ ಅದರಲಿ ನೀರಾಗಿ ಬೆರೆತು ಬಿಡು !
ಸಾಕು,
ಇನ್ನು ಏಕೆ ಈ ನಾಚಿಕೆ ?
ಕಾಡುತ್ತಿಲ್ಲವೇ ? ನಿನಗೂ,
ನನ್ನೊಂದಿಗೆ ಮಾತನಾಡುವ ಬಯಕೆ ?

ವಿರಹ ವೇದನೆಯಲ್ಲಿ
ದಿನಗಳೆಯುವುದು
ಕಷ್ಟವಾಗಿದೆ ಎನಗೆ
ಇನಿಯನಿಗಿಂತ
ಜಗದ ಕಟ್ಟುಪಾಡುಗಳೇ
ಹೆಚ್ಚಾಗಿವೆಯೇ ನಿನಗೆ ?
ಈ ಜಗವನ್ನೊಮ್ಮೆ
ಮರೆತು ಬಿಡು !
ನನ್ನೊಂದಿಗೆ ,
ನೀನೊಮ್ಮೆ ಮಾತನಾಡು

ಬಿರುಕುಬಿಟ್ಟ ನೆಲ
ಬಾಯ್ದೆರೆದು ನೊಡುವಂತೆ
ಮುಗಿಲೆಡೆಗೆ ,
ನಾ ಕಾದಿರುವೆ ಕುತುಹಲದಿ !
ನಿನ್ನ ಧ್ವನಿಗೆಳಿಸಿ
ಸಿಂಚನವ ಮೂಡಿಸು ನನ್ನೊಳಗೆ !

ಇನ್ನೂ ,
ಈ ನನ್ನ ವೇದನೆ
ಅರ್ಥವಾಗದೆ ಹೋದರೆ
ನಡೆ ನಿನ್ನ ಮನದಿಚ್ಛೆಯಂತೆ
ನಡೆ ನಿನ್ನ ಮನದಿಚ್ಛೆಯಂತೆ!!!
* * * * *
ಶಕೀಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ.

- ಶಕೀಲ್ ಉಸ್ತಾದ್

09 Dec 2016, 10:10 pm
Download App from Playstore: