ಚಂದದ ಒಡತಿ

ಸಾವಿರ ಓಕುಳಿ ಸೃಷ್ಟಿಸುತಾಳೆ ಆ ಕುಡಿನೋಟದಲೆ,
ಎದೆಯಲಿ ಕುಂತು ವೀಣೆಯ ನುಡಿಸಿ ಸುಮ್ಮನೆ ನಗುತಾಳೆ...
ಅಂದದ ಅಲೆಗಳ ಚಂದದ ಒಡತಿಯು ತರಂಗಲತೆಯಿವಳು,
ಆ ನಡಿಗೆಯಲೆ ಎಲ್ಲವ ಕುಣಿಸೊ ಮೃದಂಗಕುಲದವಳು...
ಎಲ್ಲ ಲಲನೆಯರ ನಡುವಲಿ ಒಂಥರ ರಾಣಿಜೇನು ಇವಳು,
ಹಗಲಲು ಇರುಳಲು ನೆನಪಲೆ ಬಂದು ತಲೆಯನು ಕೆಡಿಸಿಹಳು...

- ಜೀವಿ

09 Dec 2016, 11:14 pm
Download App from Playstore: