@@ಕನ್ನಡೋತ್ಸವ@@
ಉತ್ಸವ ಉತ್ಸವ ಕನ್ನಡೋತ್ಸವ
ಕರುನಾಡಿನ ಜನ್ಮದೋತ್ಸವ
ಸಿರಿನಾಡಿನ ಸಂಭ್ರಮೋತ್ಸವ
ಕರ್ನಾಟಕದ ಉದಯದೋತ್ಸವ!
ನಾಡು ಕಟ್ಟಿದ ವೀರಪುತ್ರರ
ಸಾಧನೆಗೈದ ಕನ್ನಡಿಗರ
ಡಿಂಡಿಮವ ಬಾರಿಸಿ
ಶತೃಗಳ ಸಂಹರಿಸದ
ವೀರರೋತ್ಸವ!
ರನ್ನನ ಬೀಡಿನ
ಪಂಪನ ನಾಡಿನ
ಬಸವ ಗೂಡಿನ
ಕನ್ನಡ ಮಣ್ಣಿನ ಮಕ್ಕಳೋತ್ಸವ!
ಸಿರಿಸಂಪಿಗೆ ಸೇವಂತಿಗೆ
ಸೂಜಿ ಜಾಜೀ ಮಲ್ಲಿಗೆ
ಮಾವು-ಬೇವು,ಜೋಳ-ಬತ್ತ
ರಾಗಿ ಗೋದಿ ಬೆಳೆಗಳ
ಖಣಜದೋತ್ಸವ!
ಕದಂಬ ಕಟ್ಟಿದ ನಾಡಿನೋತ್ಸವ
ಚನ್ನಮ್ಮನ ಬೀಡಿನ ಶೌರ್ಯದೋತ್ಸವ
ಜನಪದ ಸಂಸ್ಕ್ರತಿಯ ಸಡಗರೋತ್ಸವ
ಕವಿಪುಂಗರು ಹುಟ್ಟಿದ ನಾಡಿನೋತ್ಸವ!
___________________
@ಬಲವಂತ ಮೋರಟಗಿ(ಬಸವಪ್ರಿಯ)
- ಬಲವಂತ ಮೋರಟಗಿ(ಬಸವಪ್ರಿಯ)
10 Dec 2016, 01:54 pm
Download App from Playstore: