ಮದುವೆ
ಬಂಧನವದಲ್ಲವದು ಒಂದಾದ ಎರೆಡು
ಪರಿಧಿಯಿರೆ ಬಂಧನವು ಇಲ್ಲದಿರನಂತವು
ಅಂತ್ಯವಿಲ್ಲದನಂತ ಮಧುರ ಸಮ್ಮಿಲನವು
ಟಿಸಿಲೊಡೆದು ಹರಡಲೊಂದಾದ ದ್ವಂದ್ವವು
ತಿಳಿದಿತ್ತೆ ಮೊದಲೇನು ಹೊಂದುವುದು ಎಲ್ಲೆಂದು
ಯಾರೆಂದು ಹೇಗೆಂದು ಎಂದೆಂದು ಎಷ್ಟೆಂದು
ಕಲೆಸಿ ಬೆಸೆಯುವುದದುವೇ ಬೇರ್ಪಟ್ಟ ಬೆಸುಗೆಗಳು
ದೈವಮಾಡಿದ ಜೋಡು ಪ್ರೇಮವನುಭವಿಸಲು
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
10 Dec 2016, 02:54 pm
Download App from Playstore: