ಮನಸ್ಸೆಂಬ ಮಾಯೆ

ಮನವೆ ತನುವನಾಳುವ ಧನಿಕ
ಮೀರಿದೆಯಾದರೆ ಬಾಳು ಕ್ಷಣಿಕ
ದೇವನೊಲುಮೆಯ ಕಲ್ಪನೆ ಚಿತ್ರ
ಮನದ ಚಿತ್ತದಿ ನಲುಮೆಯ ಗಾತ್ರ

ಉರಗದ ಹುತ್ತದಿ ಕಾಣುವೆಯಾದರೆ
ದರ್ಪದ ಅಹಂ ವಿಷದ ಆಸರೆ
ಕೋರಿಕೆ ವಿನಃ ಅತಿಯ ದಾಹ
ಬಿಟ್ಟರು ಬಿಡದೀ ಮತಿಯ ಮೋಹ

ಮನವೇ ಸ್ವತಃ ವಾನರನ ಸಮ
ಕೇಂದ್ರೀಕೃತ ಸ್ಥಿರವಿಲ್ಲದ ಮರ್ಮ
ಕಾಣದ ಕಡಲಿಗೆ ಕರೆಯುವ ಮನವೆ
ಶಾಂತಿಯಿದ್ದರು ಕೆದಕುತಲಿರುವೆ

ನಾನಾ ವಿಧದ ಸ್ವಪ್ನ ಸಂಗತಿ
ಅವಸರ ವಿಘ್ನ ಅಸುರ ಸಂಗಾತಿ
ಸುಳ್ಳದು ಎಂದರೂ ಕೇಳದ ಆತ್ಮ
ಕ್ಷಮಿಸನು ಎಂದಿಗೂ ಆ ಪರಮಾತ್ಮ

ಕಾಂತಿಯ ತರಹದಿ ಬೆಳಗುವ ಮನವೇ
ಮಣ್ಣಿನ ಮಡಿಲಿಗೆ ಬೆರೆಸಲು ತರವೇ
-ದೇವ ಕಜ್ಜೇರ.

- Deva Kajjera

10 Dec 2016, 03:28 pm
Download App from Playstore: