ದೂರಾದ ದಾರಿಯಲಿ ನಿಂತವನ ಸ್ವಗ
ಅಶರೀರವಾಣಿ ಮೌನವೊಂದನ್ನು
ಶೂನ್ಯಕ್ಕೆಸೆದು ಸುಮ್ಮನಾಗಿದೆ
ಆತ್ಮವಿನ್ನೂ ಕಂಪಿಸುತ್ತಿದೆ
ಒಬ್ಬಂಟಿಯ ಜೋಡಿ ಕಣ್ಣ ಹನಿಗಳು
ಕೆನ್ನೆಗಿಳಿದು ಬರೆದಿವೆ
ಅಕ್ಷರವಾಗದ ಆರ್ತ ಅರ್ಥದ ನೋವಿನ ಓಲೆ
ತಲುಪಲಾರದ ವಿಳಾಸಕ್ಕೆ
ರಾತ್ರಿಯ ಕತ್ತಲು ಹಗಲಿನ ಬೆಳಕು
ತಬ್ಬಿಕೊಂಡಂತಿದೆ ಒಂದನ್ನೊಂದು
ಇಳಿಸಂಜೆಯ ಹೊತ್ತಲಿ
ನೀ ಎಲ್ಲಿ ಹೋದೆಯೋ
ನೆನಪುಗಳಲ್ಲಾದರೂ ಹುಡುಕಿಕೊಳ್ಳೋಣವೆಂದರೆ
ಹೋಗುವ ಮುನ್ನ ನೆನಪುಗಳ ಕಣ್ಣು ಕಿತ್ತು ಹೋದೆ
ಹೋದವಳ ಮನಸು ಹಗುರ
ಉಳಿದವನ ಬದುಕು ಹೆಣಭಾರ
ಯಾವತ್ತೂ ಈ ಬದುಕಿಗೆ ಎದಿರಾಗಬೇಡ
ಎದಿರಾದರೂ ನಗಬೇಡ
ನಿನ್ನ ನಗುವಿನ ಅರ್ಥ ಹುಡುಕುವ ಶಬ್ಧಕೋಶ
ನನ್ನ ಬದುಕಲ್ಲಿ ಉಳಿದಿಲ್ಲ !
- ಜೀವ ಮುಳ್ಳೂರು
8970922703
- ಜೀವ ಮುಳ್ಳೂರು
10 Dec 2016, 05:21 pm
Download App from Playstore: