ಮನಸೋಳಗೆ ಕುಳಿತಿರಲು ನೀನು
ಮನಸೊಳಗೆ ಕುಳಿತಿರಲು ನೀನು
ನನ್ನೊಳಗೆ ನನ್ನನ್ನೆ ಹುಡುಕುತಿರುವೆನು ನಾನು
ಸ್ನೇಹದ ಬಂಧನದಲ್ಲಿ ಬಂಧಿಸಿರಲು ನೀನು
ಕೇಳುವೆಯ ಪ್ರೀತಿಯ ಮಾತನ್ನು ಹೇಳಲು ನಾನು
ಸೇರುವೆಯ ನನ್ನ ನೀನು, ಕಾಯುತಿರುವೆನು ನಾನು
ತಿಳಿಯೆನು ನಾನು, ಏನೆಂದು ನೀನು
ಒಪ್ಪಲೇ ಬೇಕೆಂದು ನೋವ ಕೊಡೆನು
ಮಗುವಿನಂತೆ ಕಾಪಡುವೆನು ಒಪ್ಪಿ ಬಂದರೆ ನೀನು
ಮನಸ್ಸಿನ ಕನಸು ತಪ್ಪೇನೊ ತಿಳಿಯೆನು ನಾನು
ತಪ್ಪಿದ್ದರೆ ಮನ್ನಿಸಿ ಸರಿಯೆನು ತಿಳಿಸು ನೀನು
ಮನದ ಭಾವ ಬಿಚ್ಚಿಡುತಿಹೆ ನಿನ್ನೆದುರು ನಾನು
ಕಾಯುವೆನು ನಾನು ಒಪ್ಪಿ ಬರುವುದಾದರೆ ನೀನು
ತಿಳಿಯದೆ ಸೋತಿಹುದು ಮನಸು
ನಿನ್ನನೇ ಸೇರಲು ಕಾಯುತಿಹುದು ಕನಸು
ನಿನಗಾಗಿ ಕಾಯುತಿರಲು ಕನಸು ಮನಸು
ನೀನಾಗಿ ಬರುವೆಯ ಒಂದು ನನಸು
ನನ್ನ ಭಾವಗಳು ನೋಯಿಸಿದ್ದರೆ ಕ್ಷಮಿಸು
ಭಾವಗಳ ಮುಚ್ಚಿಟ್ಟು ಸೋತು ಸೋಲಿಸಲಾರೆನು
ಹೇಳು ನೀನು ಒಪ್ಪಿ ಬರುವೆಯೇನು
ಮನಸ್ಸು ತೆರೆದಿಟ್ಟು ಕಾಯುತಿರುವೆನು ನಾನು
.......
- ಶ್ರೀಕಾವ್ಯ
11 Dec 2016, 07:49 pm
Download App from Playstore: