ಸಿಂಧೂರ ತಿಲಕ
ನನ್ನ ಪ್ರೀತಿ ನಿನ್ನ ಹಣೆಗೆ
ಸಿಂಧೂರ ತಿಲಕವಾಗಲಿ
ಆ ತಿಲಕ ನಮ್ಮ ಪ್ರೀತಿಯ
ಬಂಧನಕ್ಕೆ ಚಿಲಕವಾಗಲಿ
ನನ್ನ ಪ್ರೀತಿ ನಿನ್ನ ಕಣ್ಣಿಗೆ
ಕಾಡಿಗೆಯಾಗಲಿ
ಆ ಕಾಡಿಗೆ ನಮ್ಮ
ಪ್ರೀತಿಗೆ ಕಾವಲಾಗಲಿ
ನನ್ನ ಪ್ರೀತಿ ನಿನ್ನ ಕೈಗಳಿಗೆ
ಬಳೆಗಳಾಗಲಿ
ಆ ಬಳೆಗಳಲ್ಲಿ ನಮ್ಮ ಪ್ರೀತಿ
ಬಂಧಿಯಾಗಲಿ
ನನ್ನ ಪ್ರೀತಿ ನಿನ್ನ ಕಾಲ್ಬೆರಳಿಗೆ
ಕಾಲುಂಗರವಾಗಲಿ
ಆ ಉಂಗರ ನಮ್ಮ
ಪ್ರೀತಿಗೆ ಶ್ರಂಗಾರವಾಗಲಿ
ನನ್ನ ಪ್ರೀತಿ ನಿನ್ನ
ಮುಡಿಗೆ ಹೂವಾಗಲಿ
ಆ ಹೂ ನಮ್ಮ ಪ್ರೀತಿಗೆ
ಪರಿಮಳವಾಗಲಿ
ನನ್ನ ಪ್ರೀತಿ ನಿನ್ನ
ನಾಸಿಕಕೆ ನತ್ತಾಗಲಿ
ಆ ನತ್ತಿನ ಒಡತಿ ನನ್ನ
ಮನದ ಒಡತಿಯಾಗಲಿ
ನನ್ನ ಪ್ರೀತಿ ನಿನ್ನ
ಕೋರಳಿಗೆ ಮಾಂಗಲ್ಯವಾಗಲಿ
ಆ ಮಾಂಗಲ್ಯ ನಮ್ಮ
ಬಾಳಿಗೆ ಶುಭಮಂಗಳವಾಗಲಿ
ಮಹೇಶ ಕಾಳಿ
- ಮಹೇಶ ಕಾಳಿ
12 Dec 2016, 11:26 am
Download App from Playstore: