ಎಲ್ಲರೆದೆಯೊಳಗೂ ಪ್ರೇಯಸಿಯಿದ್
ಎಲ್ಲರೆದೆಯೊಳಗೂ
ಒಬ್ಬಳು ಪ್ರೇಯಸಿಯಿದ್ದಾಳೆ.
ಹೇಳಿಕೊಳ್ಳುವ ಮಹದಾಸೆ;
ಕ್ಷಮಿಸಿ, ಹೆಂಡತಿ ಜೊತೆಗಿದ್ದಾಳೆ..!
ಎಲ್ಲರೆದೆಯೊಳಗೂ
ಒಬ್ಬ ಪ್ರಿಯಕರನಿರುತ್ತಾನೆ.
ಹೇಳಿಕೊಳ್ಳದೆ ಮೆಲುಕುವಾಸೆ;
ಕ್ಷಮಿಸಿ, ಗಂಡನಪ್ಪಿಕೊಂಡಿದ್ದಾನೆ..!
ಎಲ್ಲರೂ ಪರಿಪಕ್ವವಾಗುವ ಮುನ್ನ
ಬೆಂದು ನೊಂದಿದ್ದಾರೆ.
ಮೌನವ ಗಾನವಾಗಿಸಲು
ಕನ್ನಡಿಯೆದುರು ನಿಂತಿದ್ದಾರೆ.......
ಎಲ್ಲರೆದೆಯೊಳಗೂ.................!
*ಸಿಹಿಗಲ್ ಪ್ರಶಾಂತ, ಶಿವಮೊಗ್ಗ*
- ಸಿಹಿಗಲ್ ಪ್ರಶಾಂತ
12 Dec 2016, 12:57 pm
Download App from Playstore: