ಮಣ್ಣೊಳಗೆ ಮಣ್ಣಾದವರು

ಹಾಡು ಕಟ್ಟಿ ಹಂತಿ ಹೊಡೆದವರು ನಾವು
ಮಟ್ಟಿ ಹೊಡೆದು ಮೆಟ್ಟಿ ನಿಂತವರು ನಾವು
ಕವಣಿಗೆ ಕಲ್ಲು ಕಟ್ಟಿ ಕಾಳು ಉಳಿಸಿಕೊಂಡವರು ನಾವು
ಹೆಗಲಿಗೆ ನೊಗ ಕಟ್ಟಿ ನೆಲ ಊಳಿದವರು ನಾವು
ಮಳೆರಾಯನಿಗೆ ಕಾಡಿ ಬೇಡಿ ಬೆಳೆ ಉಳಿಸಿಕೊಂಡವರು ನಾವು
ಬಿಸಿಲಿಗೆ ಮೈ ಒಡ್ಡಿ ಬೆಳೆ ಬೆಳೆಸಿದವರು ನಾವು
ಮಣ್ಣಲ್ಲಿ ಮೈ ತೇದವರು ನಾವು
ನುಡಿಗೆ ನಾಲಿಗೆ ಮೇಲೆ ನೆಲೆ ಕೊಟ್ಟವರು ನಾವು
ನಾಡಿಗೆ ಬೆನ್ನೆಲುಬಾಗಿ ನಿಂತವರು ನಾವು
ನಾಡ ಬಂಡಿಗೆ ಗಾಲಿಯಾದವರು ನಾವು
ಬೇಡುವ ಕೈ ಗಿಂತ ನೀಡುವ ಕೈ ಲೇಸೆಂದವರು ನಾವು
ಸ್ವಾಭಿಮಾನಕ್ಕಾಗಿ ಉರುಳಿಗೆ ಕೊರಳು ಕೊಟ್ಟವರು ನಾವು
ಮನುಜರ ಹೊಟ್ಟೆ ತುಂಬಿಸಲು ಮಣ್ಣೊಳಗೆ ಮಣ್ಣಾದವರು ನಾವು

ರಚಣೆ:ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

12 Dec 2016, 01:37 pm
Download App from Playstore: