ನನಗೂ ಪಕ್ಕವಿದ್ದರೆ....!!!!
ಪಾತರಗಿತ್ತಿಗಿದ್ದಷ್ಟು ಪಕ್ಕ ಇದ್ದರೆ;
ಹಾರಿ ಬಿಡುತ್ತಿದ್ದೆ ಆಕಾಶದೆತ್ತರಕ್ಕೆ
ಅಂಗೈಷ್ಟಗಲ ಹಾಯಿದೋಣಿಯದ್ದರೆ;
ದಾಟಿ ಬಿಡುತ್ತಿದ್ದೆ ಕಡಲುದ್ದಕ್ಕೂ
ಗೋದಿಹುಲ್ಲಿನಷ್ಟು ಹುಲ್ಲಾಗಿದ್ದರೂ;
ಬಿಟ್ಟು ಬಿಡುತ್ತಿದ್ದೆ ಹೊರಲಾರದಷ್ಟು ತೆನೆಹೊರೆಯ
ಮಿನಗು ದೀಪದಷ್ಟು ಬೆಳಕಾಗಿದ್ದರೂ;
ಬೆಳಗಿ ಬಿಡುತ್ತಿದ್ದೆ ಕತ್ತಲ ಲೋಕಕ್ಕೆ
ಕೀರಲು ಧ್ವನಿಯಷ್ಟು ಕಿರಚಲುಧ್ವನಿಯಿದ್ದರೂ;
ಚೀರಿ ಬಿಡುತ್ತಿದ್ದೆ ಅನ್ಯಾಯಕ್ಕೆ
ಬಳ್ಳಿಯಷ್ಟು ಚಿಕ್ಕದಾಗಿದ್ದರೂ;
ಚಾಚಿಕೊಂಡು ಬಿಡುತ್ತಿದ್ದೆ ಜಗದ ಚಾವಣಿಗೆ
ಗುಬ್ಬುಯಷ್ಟು ಪುಟ್ಟದಾಗಿದ್ದರೂ;
ಕಟ್ಟಿ ಬಿಡುತ್ತಿದ್ದೆ ಗೂಡೊಂದ ಈ ಲೋಕಕೆ
ಇರುವೆಯಷ್ಟು ಚಿಕ್ಕದಾಗಿದ್ದರೂ;
ದುಡಿದು ಬಿಡುತ್ತಿದ್ದೆ ಜಗಕುಟುಂಬಕ್ಕೆ
ಮಂದಗೇಡಿಯಷ್ಟು ಬುದ್ದಿವಂತನಾಗಿದ್ದರೂ;
ಬರೆದು ಬಿಡುತ್ತಿದ್ದೆ ತಾಯ ನುಡಿ ಲೋಕಕ್ಕೊಂದು ಹಾಡು
ರಚಣೆ: ರೇವಣಸಿದ್ದ ಗೌಡರ
ರಬಕವಿ-587324
Mobile:9008060918
- Revanasidda Goudar
12 Dec 2016, 02:09 pm
Download App from Playstore: