ಪೆಡಂಭೂತ...
ಭ್ರಷ್ಟ ದುಡ್ಡು ,
ದಂಡಿ ದಂಡಿಯಾಗಿ ಬೆಳೆದು
ಕಪ್ಪು ಧನವಾಗಿ ಮುಚ್ಚಿಟ್ಟು ಬಿಟ್ಟರೋ
ಜಾಣನೆಂಬ ವೀರನೊಬ್ಬ
ಕಠಾರಿಯನ್ನಿಡಿದು ಅಗೆದು ಬಗೆದು
ತೋಡಿ ಬಯಲಿಗಿಟ್ಟನೋ
ನೋಡು ಬಡವ , ಕಾಳಧನಿಕನ ಪರದಾಟವ
ವಿಲವಿಲನೆ ಬಡಿದು ಕೊಳ್ಳುವ
ಅವನ ಜೀವವ
ಗರಿಗರಿ ನೋಟಿಗೆ ಕಡ್ಡಿ ಗೀರಿ
ಬೆಂಕಿಯಿಟ್ಟ ಕಾಳಧನಿಕನು,
ಭ್ರಮಣೆಗೊಂಡು ಹರಿದುಕೊಂಡ
ತೊಟ್ಟ ಬಟ್ಟೆಯ ,
ಬೀದಿ ಎಂಬ ಬಯಲಲ್ಲಿ
ದಿಗಂಬರನಾಗಿ ಹೋದನು
ಕೆಟ್ಟ ಹೃದಯವು ಅಯ್ಯೋ ಎಂದಿದೆ
ಜಾಣನೆದುರು ಮಂಡಿಯೂರಿದೆ.
--ಭಾಮಿನಿ ಡಿ,ಕೆ ,ಎಸ್
- bhamini. chitradurga
12 Dec 2016, 10:34 pm
Download App from Playstore: