ಕಾದಿಟ್ಟ ಕನಸಲಿ ನಿನ್ನ ಅರಸುವ

ಕಾದಿಟ್ಟ ಕನಸಲಿ ನಿನ್ನ ಅರಸುವೆ
ಕಾಣದೆ ಕರೆವೆ,ತಪಿಸುವೆ
ಸರಿದಾಡುವೆ ಸನಿಹದಿ ನೀ ಚಿಟ್ಟೆಯಂತೆ
ಅರಳಿರುವೆ ಘಮದಿ ಸಂಪಿಗೆಯಂತೆ
ನೋಟದಲ್ಲೇ ನನ್ನ ಸೋಕುವೆ
ಹುಸಿಮುನಿಸ ಸೂಸುವೆ
ಸನಿಹ ನಿಂತು ಕೆಣಕುವೆ
ಬಂದಾಗ ದೂರ ಓಡುವೆ
ಬೆವೆತು ಲಜ್ಜೆಯಲಿ ಇಣುಕುವೆ..

‌‍ಕಾಡಿ ನಲಿದಾಡುವೆ
ಬೇಡಿ ಶರಣಾಗುವೆ
ಬಳಿಸರಿದು ಪಿಸುಗುಡುವೆ
ಬಳಸಿ ಪರವಶತೆ ತೊರುವೆ
ಬೆರಗಿನಲಿ ಬೆರೆಯುತಾ
ನನ್ನಲ್ಲಿ ನಿನ್ನ ಹುಡುಕುವೆ
ನಿನ್ನಲ್ಲಿ ನನ್ನ ಬೆಸೆಯುವೆ...

- Indushekar Chinivar

13 Dec 2016, 07:32 am
Download App from Playstore: