"ನನ್ನೆದೆಯ ಹಾಡು"
---------
ನನ್ನೆದೆಯ ಹೊಂಗಾಡಿನಲ್ಲಿ
ನಿನ್ನದೆ ನೆನಪು ಗೆಳತಿ
ಮತ್ತೆ ಮತ್ತೆ ಬರುತೈತಿ
ನೋವನ್ನು ತರತೈತಿ!
ನಿನ್ನ ಮನದ ಮೌನದಲ್ಲಿ
ನನ್ನ ಜೀವ ತುಂಬೈತಿ
ನಿನ್ನ ಮಾತಿನಾಂತರ್ಯದಲ್ಲಿ
ನನ್ನೆದೆಯ ಹಾಡೈತಿ!
ನಿನ್ನ ಕಣ್ ನೋಟದಲ್ಲಿ
ಅದಮ್ಯ ಪ್ರೇಮ ಅರಳೈತಿ
ನಿನ್ನ ಪ್ರೇಮ ಸೆಳೆತದಲ್ಲಿ
ನನ್ನೆದೆಯ ಹಾಡೈತಿ!
ಕಾರಣವಾಯಿತು ನನ್ನ ಬಾಳಿಗೆ
ನಿನ್ನಯ ಪ್ರೀತಿಯ ಬೆಸುಗೆ
ಚಿಗುರೊಡಿಯಿತು ನನ್ನದೆಯಲ್ಲಿ
ಮಾಗಿದ ಕನಸ್ಸು
ಪ್ರೇರಣಯಲ್ಲವೇ ಅದಕ್ಕೆ
ನಿನ್ನ ಮೊಗ್ಗಿನ ಮನಸ್ಸು!
---------------------------------------------
@ ಬಸವಪ್ರಿಯ
(ಬಲವಂತ ಮೋರಟಗಿ)
- ಬಲವಂತ ಮೋರಟಗಿ(ಬಸವಪ್ರಿಯ)
13 Dec 2016, 10:50 am
Download App from Playstore: