ಹೆತ್ತವಳು
ಅಮ್ಮ,
ಬಂದಿರುವುದು ಕಳೆಯಲು ಒಂದಿಷ್ಟು ದಿನ
ಬಂಧನಗಳ ನಡುವೆ ಏಕೆ ಕಟ್ಟಿ ಹೋಗಿದೆ ಈ ಮನ
ನನ್ನದಿಲ್ಲಿ ಎನ್ನಿಲ್ಲ ಎಂಬ ಅರಿವಿದೆ
ಆದರು ಮಹಾದಾಸೆಗಳ ಹೊತ್ತು ಈ ಜೀವ ಸಾಗಿದೆ
ಪುಟ್ಟ ಪುಟ್ಟ ಕನಸು ಬೆಳೆದು ದೊಡ್ಡದಾಗುವುದೇಕೆ?
ಚಿಗುರುವ ಮುನ್ನವೆ ಬಾಡಿ ಹೋಗುವುದೇಕೆ..
ಅರ್ಥವಾಗದ ಈ ಜೀವನಕ್ಕೆ ಉತ್ತರವೆಲ್ಲಿ ಹುಡುಕಲಿ..
ಕೈ ಹಿಡಿದು ನೆಡೆಸೆನನ್ನು ಬಾ ಬೇಗ ನಿನ್ನಿಂದು.
ರವೀಂದ್ರ ಬಿ.ಆರ್.
- ರವೀಂದ್ರ
13 Dec 2016, 11:41 am
Download App from Playstore: