ಮಗು ನಾನು

" ಮಗು ನಾನು"
-------------
ಈಗೀಗ ಕಣ್ತೆರೆದ ಮಗು ನಾನು
ಜಗದ ಬೆಳಕ ನೋಡಲು
ನನ್ನ ಪಾತ್ರ ನಾನಾಡಲು

ಈಗ ಜನ್ಮತಳೆದ ಜೀವ ನಾನು
ಯಾರು ತಂದೆ? ಯಾರು ತಾಯಿ?
ಯಾರು ಬಂಧು ಬಳಗ ನಾ ಕಾಣೆ?

ಯಾರೋ ಹೆಸರಿಡವರು
ಯಾರೋ ಉಸಿರ ನೀಡಿದವರು
ಒಂದು ತಿಳಿಯದು ಈ ಅನಾಮಿಕಗೆ

ಯಾರೋ ಎತ್ತಿಕೊಳ್ಳವರು
ಯಾರೋ ಮುದ್ದಿಸುವರು
ಅದೋ ಗೊತ್ತಿದೆ ನಾನವರ
ಪ್ರೀತಿಯ ಜೀವಗೊಂಬೆ

ರಚನೆ* ಆನಂದ ಎಸ್ ಪೂಜಾರಿ

- ಆನಂದ ಪೂಜಾರಿ

13 Dec 2016, 07:24 pm
Download App from Playstore: