ಅಸಹಾಯಕನ ಮೂಕವೇದನೆ ನಮ್ರ ನಿವ

ನನ್ನುಸಿರು ನೀನೆ, ಓ ನನ್ನ ಸದ್ಗುರುವೆ,
ಗುರಿ, ಗಮ್ಯ ನೀನೇ - ಧ್ಯೇಯ ಗುರುವೆ!

ಎಷ್ಟುಸಲ ಕಟ್ಟುವದು,
ಎಷ್ಟುಸಲ ಬಿಚ್ವುವುದು,
ಈ ಧ್ಯಾನದ ಪೆಟ್ಟಿಗೆ !

ಹೇ ನನ್ನ ಗುರುದೇವ,
ನನ್ನನ್ನೇ ಕಟ್ಟು, " ನಿನ್ನೊಳಗೆ "!

ಏರಿಳಿದೆ ಅಧ್ಯಾತ್ಮ ಸಾಧನೆಯ ಅಟ್ಟಿಗೆ,
ಆದರೂ ಬರಿದಾಗಿಯೇ ಇದೆ,
ನನ್ನ ಹೃದಯದ ಅರವಟ್ಟಿಗೆ

ನಿನ್ನ ಪ್ರೀತಿಯ ಧಾರೆ
ಹರಿಯಿಸೀ ಹೃದಯದಲಿ
ಈ ನನ್ನ ಜನುಮ ಸಾಥ೯ಕವೇ ಆಗಲಿ
ನನ್ನ ಈ ಬರಡಾದ ಹೃದಯದಲಿ
ನಿನ್ನ ಕರುಣೆಯ ಗಂಗೆ ಹರಿದುಬರಲಿ

ತಿಮಿರಾಂಧಕಾರವೇ ತುಂಬಿದೆನ್ನೆದೆಯಲ್ಲಿ
ನಿನ್ನ "ನಿಜರೂಪ ದಶ೯ನವು" ಮೂಡಿಬರಲಿ
ಪರಮಸತ್ಯದ ಆ ಅನಂತವು ಗೋಚರಿಸಲಿ

ಅದಕಾಗಿಯೇ ಹೇ ಗುರುವೆ
ಬಂಧನವ ಕಳೆವ ನಿನ್ನ ಮೋಹಕಸೆಲೆಯು
ಬತ್ತದಂತಿರಲಿ ನನ್ನಲ್ಲಿ ಆರದಂತಿರಲಿ

ಬೆಳಕು-ಕತ್ತಲೆಯ ಅಚೆಗಿನ ಆ ನಿನ್ನ
" ಪರತತ್ವ ಸ್ವರೂಪ " ಭಾಸವಾಗಲಿ ಎನಗೆ
ಪಸರಿಸಲಿ ನನ್ನಲ್ಲಿ, ನನ್ನನಾವರಿಸಲಿ

ಅದೇನು ಮೋಡಿಯಮಾಡಿ ನೀ
ನಿನ್ನ ಗುರುವಿನ ಹೃದಯವನು ಗೆದ್ದೆ!
ನನಗೂ ಕಲಿಸಪ್ಪ ಆ "ಮೋಡಿ-ವಿದ್ಯೆ"

ಹೇಗೆ ಪ್ರೇಮಿಸಲಿ ನಿನ್ನ, ಹೇಳಿಕೊಡು ನನಗೆ
ನಿನ್ನ ಸ್ಮರಿಸುವ ಕಲೆಯ ಕಲಿಸು ನನಗೆ

ಅಧ್ಯಾತ್ಮ ಲೋಕವನು ಬೆಳಗಿಸಿದ ಭಾನು
ನನ್ನಂತರಾಳದ ಕತ್ತಲೆಯ ನೀಗಿಸು
ಮಾಗ೯ದಶ೯ನಮಾಡನನ್ನಂತರಾಳದಿ ಬೆಳಕನ್ನು ತೋರಿಸು

ಪ್ರೇಮಭಕ್ತಿಯ ಸ್ಫುರಿಸಿ ಸೂಕ್ತನಾಗಿಸು ನನ್ನ
ನಿನ್ನಲ್ಲಿ ಒಂದಾಗುವ ದಾರಿ ಸರಿಪಡಿಸು
ನಾನು - ನೀನಾಗಲು, ನೀನು - ನಾನಾಗಲು

ಎಷ್ಟುಸಲ ಕಟ್ಟುವುದು ಪೆಟ್ಟಿಗೆ
ಎಷ್ಟುಸಲ ಬಿಚ್ಚುವುದು
" ನನ್ನನ್ನೇ ಕಟ್ಟು ನಿನ್ನೊಳಗೆ "

... ಪ್ರದೀಪ ಪುರಾಣಿಕ

- PRADEEP PURANIK

13 Dec 2016, 11:56 pm
Download App from Playstore: