ಪಿಸುಮಾತು...

ಆಕಾಶದಿ ಹಾರಡುವ ಹಕ್ಕಿಗಳ
ರೆಕ್ಕೆಯಲ್ಲಡಗಿದೆ ಪಿಸುಮಾತು

ಎರಡು ಜೀವಗಳ ಪ್ರೀತಿಗೆ
ಕಂಗಳಾಡುವ ಪಿಸುಮಾತು

ಅಮ್ಮನ ಮಡಿಲಲ್ಲಿ ಮಗುವು ಕಿಲಕಿಲ
ನಗುವಲ್ಲಡಗಿದೆ ಪಿಸುಮಾತು

ಎಲ್ಲರೆದೆಯೊಳಗೆ ಸದಾ ತುಡಿಯುತಿದೆ
ಕಿವಿಗೊಟ್ಟು ಕೇಳಿರಿ ಅದರ ಪಿಸುಮಾತು.

- ಮಂಜು.ಕೆ

- Manju

14 Dec 2016, 11:56 am
Download App from Playstore: