ಮಳೆ ಬಂತು ಮಳೆ
"ಮಳೆ ಬಂತು ಮಳೆ
==============
ಮಳೆ ಬಂತು ಮಳೆ
ಬಿರಿ ಬಿಸಿಲಿನ ನಾಡಿಗೆ
ಬರಡು ಬರಿದಾದ ಬಯಲಿಗೆ
ಮಳೆ ಬಂತು ಮಳೆ
ಬಿರಕು ಬಿಟ್ಟ ಭೂಮಿಗೆ
ರಣಗುಡವ ರಣಾಂಗಣಕ್ಕೆ
ಮಳೆ ಬಂತು ಮಳೆ
ಉತ್ತಿ ಬತ್ತಿಹೋಗವ ನೆಲಕ್ಕೆ
ಕೈ ಹೊತ್ತು ಕುಳಿತ ಜನರ ಮನಕ್ಕೆ
ಮಳೆ ಬಂತು ಮಳೆ
ಧಗಧಗ ದಗಿಸುವ ಧರೆಗೆ
ಬಿಸಿಲು ಜಳ ಇರುವ ಇಳೆಗೆ
ಮಳೆ ಬಂತು ಮಳೆ
ಹಸಿವಿನಿಂದ ಬಳಲಿದ ಜನರಿಗೆ
ಬಿಸಿಲಿನಿಂದ ಕಂಗೆಟ್ಟ ದಾರಿಗೆ
ರಚನೆ* ಆನಂದ ಎಸ್ ಪೂಜಾರಿ
ರನ್ನ ಮುಧೋಳ
Ph. 8904215983
- ಆನಂದ ಪೂಜಾರಿ
15 Dec 2016, 03:08 pm
Download App from Playstore: