ಬರಗಾಲ
ನೇಸರನು ತನ್ನ ಸುಡುವ ನಾಲಿಗೆಯಿಂದ
ನೆಲವ ನೆಕ್ಕಿ ನಕ್ಕಾನ
ಹಸಿರು ಫಸಲ ನುಂಗಿ ತೇಗ್ಯಾನ
ಝುಳು ಝುಳು ಹರಿಯುವ ಜಲವನ್ನೆಲ್ಲ
ಹಿಂಗಿಸಿ ಕಿಸಿ ಕಿಸಿ ನಕ್ಕಾನ
ಚಿಲಿ ಪಿಲಿ ಗುಟ್ಟುವ ಹಕ್ಕಿಗಳ
ಕತ್ತು ಹಿಚಕ್ಯಾನ
ಮೂಕ ಪ್ರಾಣಿಗಳ ಒಡಲು ಬಗಿದಾನ
ಗಿಡ ಮರ ಬಳ್ಳಿಗಳ ಒಣಗಿಸಿ
ವಿಕೃತ ನಗಿ ಬೀರಾನ
ರಚಣೆ:ರೇವಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ.೯೦೦೮೦೬೦೯೧೮
- Revanasidda Goudar
15 Dec 2016, 06:14 pm
Download App from Playstore: