ಮಾಗಿಯ ಚಳಿ

ಮಾಗಿಯ ಚಳಿಯು ಮೈದಡವುತಿರಲು
ಸೋನೆ ಮಳೆಯು ಜೊತೆಗೂಡಿರಲು
ಧರಣಿಯ ಒಡಲಲಿ ಕಂಪನದಾವಳಿ
ನನ್ನದೇ ಗೂಡಿಲಿ ವಿರಹದ ಕರಾವಳಿ

ನಲ್ಲೆಯ ಚುಂಭನ ಬಯಸಿದ ಮನಸಿದು
ಆಲಿಂಗನದ ಬಿಸಿಗಂಬಲಿಸಿದ ತನಿವಿದು
ನಿನ್ನೆದೆ ತನುವಲಿ ಉದುಗಲೆಂದೆನೋ
ನನ್ನೆದೆಯ ಕಡಲು ಅಬ್ಬರಿಸುತಿದೆ

ಜಿಟಿಜಿಟಿ ಹನಿಹನಿ ಕಲರವದಲ್ಲು
ಬಿಸಿಲನು ಮರೆಸುತ ಸಾಗಿದೆ ಈ ಮಳೆ
ಭುವಿಯನು ತಾಕಿ ಚಿಮ್ಮುವ ಹನಿಯಲಿ
ಕಂಡೆನು ನಲ್ಲೆ ನಿನ್ನಯ ಕಾಲ್ಗೆಜ್ಜೆಯನು

ಮಳೆ ಹನಿ ಚಿಮ್ಮುವ ಚೆಲುವಲಿ
ನಿನ್ನಯ ಪಾದದ ನರ್ತನದಾವಳಿ
ಚುಮುಚುಮು ಚಳಿಯು ನಗೆ ಬಿರುತಿದೆ
ನನ್ನೊಳಗದು ಮೈದೋರಿ ನಿಲ್ಲುತಿದೆ

ಬಿಡದೆ ಸೋ ಎಂದು ಸುರಿಯುವ ಸೋನೆಗೆ
ತಿಳಿಯಿತೇನೊ ನೀ ಬಳಿ ಇರದ ಸುಳಿವು
ಕಾಡುತಿರುವಿಬ್ಬರು ನಲ್ಲೆ ಭಲ್ಲೆಯ ನೀನು
ಬಳಿ ಇರಬೇಕಿತ್ತು ನೀ ಈ ಸಮುದಲ್ಲಿ

ನಡುಗುವ ಮೈ ಮನ ಸೀತದ ಗಾಳಿಗೆ
ನಿನ್ನಯ ನೆನಪಿನ ಚಿತ್ರಾವಳಿಯಲು
ಚುಂಭನದಬ್ಬಲ ಬಯಸಿದೆ ಬಯಲು
ನಡುಗುವ ತುಟಿಯು ಕಾಡಿದೆ ಅಸಲು

ಸೋನೆಯು ಮಾಗಿಯು ಜೊತೆ ಸಾಗಿರಲು
ಮಿಲನದ ಸಂಭ್ರಮ ನನ ಕಾಡುತಿರಲು
ತಪ್ಪು ಎನಬೇಡವೇ ಸಖಿ ಇದು ಮಾಗಿಯ ಕಾಲ
ಬಂದು ಬಿಡು ಒಮ್ಮೆ ಮುಖಾಮುಖಿ
ಇಬ್ಬರು ಒಂದಾಗಬೇಕಿದೆ ಸಖಾಸಖಿ...

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:34 pm
Download App from Playstore: