ಮುಗುಳು ನಗೆ

ನಲಿವಿನ ಮುನ್ನ ಸುಳಿದಾಡುವೆ
ನಗುವಿನ ಸಾರಥಿ ನೀನಾಗಿರುವೆ
ಮೌನವ ತಬ್ಬಿದ ಮೊಗದೊಳಗೆ
ನಲ್ಮೆಯ ಕಂಪನ ನೀ ತರುವೆ
ಹೇಳಿಬೀಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಪ್ರೇಮ ಸಮ್ಮತಿಗೆ ಮುನ್ನುಡಿ ಬರೆವೆ
ವಿರಹದಲು ನೆನಪುಗಳ ಕಲರವವಾಗುವೆ
ನಲ್ಲೆಯ ಅಂತಿಮ ನಿರ್ಗಮನದಲಿ
ನೋವಿಗ ಚರಿತೆಗೆ ಬೆನ್ನುಡಿ ಬರೆವೆ
ಹೇಳಿಬಿಡು ಮುಗುಳುನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮುದುಡಿದ ತಾವರೆಯಲು ಇರುವೆ
ಅರಳುವ ಗುಲಾಬಿಯಲು ನಲಿವೆ
ಜನನಕೂ-ಮರಣಕೂ ನಿನ್ನದೇ ಸ್ವಾಗತ
ಮೊಗದಲಿ ಸಂಚರಿಸುವ ಸುಧೆಯೇ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮಳೆ ಹನಿ ತುಂತುರು ಮೈದಡಿವಿರಲು
ಮುತ್ತಿನ ಮಾಲೆಯ ಅದು ಹೆಣೆದಿರಲು
ಮುಂಜಾವಿನ ಸೋನೆಯು ನಿನಾಗಿರಲು
ಭುವಿಯ ಕಂಪನ ನನ್ನೆದೆ ಚುಂಬನ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಬರೆಯು ಕವಿತೆಯ ಸಾಲಿನಲಿವಿತು
ವೀಣೆಯ ಮಿಟುವ ವೈಣಿನೊಳಗು
ಸ್ವರವನು ಬೆರೆಸುವ ಗಾಯಕನಲ್ಲು
ಕೇಳುವ ರಸಿಕನ ನಗೆ ಮೋಗದಲ್ಲು
ಚಿಮ್ಮುವ ಚಿನಕುರುಳಿ ಹೇ ಮುಗುಳು ನಗೆ
ಹೇಳಿಬಿಡು ನೀ ಯಾರ ಸ್ವತ್ತೆಂದು ನನಗಿಂದು

ನವಿನಲಿ ನಾಟ್ಯಕೆ ಜೊತೆ ಇರುವೆ
ಕೋಗಿಲಿ ಸ್ವರದಲೂ ಅಡಗಿರುವೆ
ಅರಿಯು ನೀರಲು ಕಲರವ ನಿನ್ನದೇ
ಪ್ರಕೃತಿ ಸ್ವಭಗನು ಕಂಡೊಡೆ ಜನಿಸುವೇ
ಹೇಳಿಬಿಡು ಮುಗುಳು ನಗೆ
ನೀ ನನ್ನ ಸ್ವತ್ತೆಂದು ನನಗಿಂದು...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:38 pm
Download App from Playstore: