ದೇವರು ಹಚ್ಚಿದ ಹಣತೆ
ಅಂತರಂಗದ ಪ್ರೇಮ ಗುಡಿಯ ಅಂಗಳದಲಿ
ಹಾರದೆ ಉರಿಯಲಿ ದೇವರರು ಹಚ್ಚಿದ ಹಣತೆ
ತಮಂದ ಪಯಣಕೆ ನಿರ್ಮಲ ಬೆಳಕನು
ಚಲ್ಲುತ ಸಾಗಲಿ ನವೂದಯದ ಪ್ರಣತಿ
ಅದಿ-ಅಂತ್ಯಕೂ ನೋವು-ನಲಿವಿಗೂ
ಇರಲಿ ಬೇದವಿಲ್ಲದ ಪ್ರೀತಿಯ ಸಮತೆ
ಬಯಸಂಶಯಗಳ ಸಂಕೋಲೆಯಲಿ
ಬದುಕಿಗೆ ಸಾರಲಿ ಒಲುಮೆಯ ಘನತೆ
ಕೊಲ್ಲಲು ಎತಿದೆ ಕೈಗೂ ಗೊತ್ತಿದೆ
ಒಲುಮೆಯ ಬೆಚ್ಚನೆ ಅಪ್ಪುಗೆಯ ಪ್ರೀತಿ
ಚುಚ್ಚುವ ಮುಳ್ಳಿನ ನಡುವೆ ನಗುವುದು
ಗುಲಾಬಿ ಹೂವಿಗದು ಬದುಕಿನ ನೀತಿ
ಜ್ವಾಲಮುಖಿಯನು ಚಿಮ್ಮುವ ಒಡಲಲು
ಚಿಗುರದೇ ಚೆಲುವಲಿ ಹಸುರಿನ ಗರಿಕೆ?
ಸುನಾಮಿ ಅಲೆಯಲು ಅಡಗಿ ಕುಳಿತಿದೆ
ಶಾಂತತೆಯ ಮಧುರ ಮಂಥನದ ಮಹಿಮೆ
ದ್ವೇಷವ ಸಾರುವ ಮನಸಿನ ಕೊಳದಲು
ಚಿಮ್ಮಲಿ ಸಿಹಿ ನಲ್ಮೆಯ ಪನ್ನಿರಿನ ಒರತೆ
ಜಾತಿ-ಮತಗಳ ಮಂದಿರದಲ್ಲು ಇರಲಿ
ಏಕರೀತಿಯ ಮನುಜ ಪ್ರೇಮದ ಅಳತೆ
ಸುಡುವ ಸೂರ್ಯನು ತಂಪು ಚಲ್ಲುವ
ಸಂಜೆಯ ಕರಪಿನ ರಂಗಿನ ಬಾನಿನಲಿ
ಉರುಳುವ ಚಂದಿರನು ನಗುವನು
ಏಕಾಂತದಲಿ ಅದುವೆ ಅವನಿಗೆ ಸ್ಪೂರ್ತಿ
ವಿವಿಧತೆಯಲಿ ಏಕತೆ ಸಾರುತಿಲಿರವ
ಕಾಣದ ದೇವನೆ ಇದುವೇ ನಿನ್ನಯ ರೀತಿ
ಅಳುಸುವೆ-ನಗಿಸುವೆ ಕೋಡಿಸಿ ಒಲಿಸುವೆ
ನಿನಗದು ಬದುಕಿನ ಭರವಸೆಯ ನೀತಿ
ಬೆಳಗುವ ಹಣತೆಯ ಹೃದಯದಿ ಹಚ್ಚುವೆ
ಸುಡುವುದಕದನು ಬಳಸುವದು ಆನೀತಿ
ಸುಟ್ಟರು ನರಳದೆ ಸಾಗುವುದನು ಕಲಿಸುವೆ
ಸಾವಿಗೂ-ನೋವಿಗು ಕಾರಣ ನೀನಾಗಿರುವೆ
ನತ್ಮಯ ದೇವನೆ ನಿನ್ನ ಲಿಲೇಗೆ
ಚಿನ್ಮಯ ನಾ ನಿನ್ನನು ಸೇರುವ ಹೊತ್ತಗೆ...
,-ಸಿದ್ದುಯಾದವ್ ಚಿರಿಬಿ...,
- ಸಿದ್ದುಯಾದವ್ ಚಿರಿಬಿ
15 Dec 2016, 06:42 pm
Download App from Playstore: