~¶ಮಿನುಗಬೇಕು ಕವನದ ಸಾಲು¶~
ಹೊಸದೊಂದು ಶಬ್ದಕೋಶ ಬಳಸಬೇಕಿದೆ ನಾನಿಂದು
ಬಳಸಿದ ಅಕ್ಷರಗಳನೆ ಬಳಸಿ ಬಳಸಿ
ಸಾಕಾಗಿದೆ ಕವಿತೆಗಳಿಗೆ
ಕಡಲ ಜಿಗಿದು ಒಡಲ ಬಗೆದು
ಸಾಹಿತ್ಯದ ಭಂಡಾರ ಕದಿಯಬೇಕು ನಾನು
ವಿಣೆಯಲಿ ಸ್ವರವು ಚಿಮ್ಮಿ ಮೈ ಮನಗಳನು ಕುಣಿಸುವಂತೆ
ಸಾಗರದ ಅಲೆಗಳು ಹುಣ್ಣಿಮೆಯ ಕಂಡು ಉಕ್ಕುವಂತೆ
ಅಪ್ಸರೆಯರ ನಾಟ್ಯಶಾಸ್ತ್ರದ ಭಾವ ಭಂಗಿಯಂತೆ
ಶಬ್ದಗಳು ತಾವೆ ತಾವಾಗಿ ಹೊಮ್ಮುವಂತೆ
ನನಗೇನೋ ಹೊಸತನದ ಸ್ಪರ್ಷ ಬೇಕಾಗಿದೆ
ಮಿನುಗಬೇಕು ಕವನದ ಸಾಲು
ನಕ್ಷತ್ರಗಳ ಮಿಂಚಿನಂತೆ
ಸ್ವರಮಾಲೆಯ ಹಗೆದು ಬಗೆದು
ಎಣೆಯಬೇಕು ಬಲೆಯಂತೆ
ಮಾಯಾ ಲೋಕದ ಸ್ವಪ್ನ ಸುಂದರಿಯ
ಹಂಸನಡಿಗೆ ಲಾಸ್ಯದಂತೆ
ರಂಭೆ, ಊರ್ವಶಿ, ಮೇನಕಿಯರ ಬೆಡಗು
ಭಿನ್ನಾಣಗಳ ಕಡೆದು ಮಾಡುವಂತೆ
ಪ್ರತಿ ಮಾತುಗಳು ಮುತ್ತಿನ ಮಳೆಯಾಗಬೇಕು
ಪ್ರತಿ ಸಾಲುಗಳು ಬಳುಕಿ ಹರಿವ ನದಿಗಳಾಗಬೇಕು
ಕವಿತೆಗಳೆಲ್ಲ ಕಲೆತು ಸಾಗರವದ ಅಲೆಯಾಗಿ
ಮನಸುಗಳ ದಡಕಪ್ಪಳಿಸಿ
ರೊಮಾಂಚನದ ಸಂಚಲನೆ ಮೋಡಿಸಬೇಕಿದೆ ನಾನು...,
-ಸಿದ್ದುಯಾದವ್ ಚಿರಿಬಿ...,
- ಸಿದ್ದುಯಾದವ್ ಚಿರಿಬಿ
15 Dec 2016, 06:46 pm
Download App from Playstore: