"ಯಾಕೆ ಸುಮ್ಮನೆ ಕುಳಿತೆ ಸೀತೆ

ಜನಕಾ ರಾಯನು ತೊರೆದು
ಶ್ರೀರಾಮಚಂದ್ರನ ಮಡಿಲರಸಿ
ಸೂರ್ಯವಂಶದ ಪಟ್ಟದರಸಿಯಾದೆ
ನರಕದ ನಾಕಕ್ಕೆ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಪಟ್ಟಧರಿಸಿಯಾದೆ ಕಾನನದ ಪಾಲಾದೆ
ಪತಿ ಜೊತೆ ನಡೆದಾಡಿದ ದಾರಿಯಲಿ
ಕಲ್ಲು ಮುಳ್ಳುಗಳುಡುಕದೆ ಮೌನದಿ ನಡೆದೆ
ಏಕಪತ್ನಿ ವ್ರತಸ್ಥನ ಒಂದು ಮಾತು ಕೇಳದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ರಾವಣದ ಕಪಡದಲ್ಲಿ ಪತಿ ಜೀವಕ್ಕಂಜಿ
ಬಲಿಯಾದೆ ನೀ ಅನಾಟದ ಪಗಡೆಯಲಿ
ಅಶೋಕವನದ ತಳಿರಿನ ತಂಪಿನಲಿ
ಮೌನದ ಕಂಗಳ ತುಂಬ ಶೋಕದ ನೆರಳಿನಲಿ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಅವನ ಸಂಹಾರ ಮರುಹುಟ್ಟು ಪಟ್ಟಧರಸಿ
ಮತ್ತೊಮ್ಮೆ ಸೀಡಿಲು ಬಡಿಯಿತೆ ಅಗ್ನಿಯ ದಾಳಕೆ
ಪರಪುರುಷನ ಸೊಕಲಾರದ ಮೈ ಪರಿಕ್ಷೇಯಲಿ
ಅಗ್ನಿಯ ತೆಕ್ಕೆಗೆ ನೋಕಿದಾಗಲು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಎಲ್ಲಾವು ಮುಗಿಯಿತು ರಾಜ್ಯ ವೈಭೋಗದಿ
ನೆಮ್ಮದಿಯ ನಿಟ್ಟುಸಿರಿಗೆ ಮಡಿಲಲ್ಲಿ ತುಂಬಿತ್ತು
ತುಂಬು ಗರ್ಭಿಣಿಯ ಮನವರಸಿತು ವನ ತಂಗಾಳಿ
ಅಲ್ಪಾಗಸನ ನುಡಿಗಲ್ಲಿ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಲವ-ಕುಶರ ಜನನ ಸಂತಸದ ಜೀವನ
ಮಕ್ಕಳೊಳಗೂಡಿ ವಾಲ್ಮಿಕಿಯ ಆಶ್ರಮ
ಅಶ್ವಮೇಗದ ಯಾಗ ಕುದುರೆಯ ಕಟ್ಟಿ
ತಂದೆಯೊಂದಿಗೆ ಮಕ್ಕಳು ಯುದ್ದಕ್ಕಿಳಿದಾಗ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಜಗದ ನೋಟದಲಿ ಪತಿರ್ವತೆ ನೀನಾದೆ
ಶ್ರೀರಾಮಚಂದ್ರನು ಆದರ್ಶ ಪತಿಯಾದ
ಹೆಣ್ಣೆ ನೀ ಗಂಡಿನ ತೆಕ್ಕೆಯಲಿ ಪಳಗಿಬಿಟ್ಟೆಯಾ?
ಮರು ಮಾತನಾಡದೆ ಅವನಿಟ್ಟಡಿಯಲ್ಲಿಟ್ಟೆ
ಯಾವ ಸಂತೊಕ್ಕಾಗಿ ಕಷ್ಟವನುಂಡೆ ಹೇಳು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:48 pm
Download App from Playstore: