¶ಮಿಡಿಯದಿನ್ನು ಹೃದಯ ವೀಣೆ¶

ನನ್ನೆದೆಯ ಗುಡಿಸಲಿಗೆ ಸಿಡಿಲೊಡೆಯಿತು
ನೀನಾಡಿದ ಬಿರುಸು ನುಡಿಗಳಿಂದ
ಎದೆ ಸೀಳಿದ ವಿರಹ ಬಾಣಕೆ
ತತ್ತರಿಸಿ ಬಿಕ್ಕಳಿಸುತಿದೆ ಹೃದಯ ಬಡಿತ

ಬಡವನಾನು ತಿಳಿತ್ತಲ್ಲವೇ ನೀನಗದು
ಬದುಕಿನಾಟ ಬಲ್ಲವರಾವು ತಿಳಿಯುವುದ್ಯಾಗೆ
ಮುಗಿಸಿ ಹೋದೆ ನನ್ನ ಕಥೆಯ ದುರಂತದಲ್ಲಿ
ಸಿಡಿಲೊಡೆಯಲು ನನ್ನ ಮನೆಯೇ ಬೇಕಿತ್ತೆ ನಿನಗೆ?

ಬಿರಿದ ಹೂವಿನಂದ ನೋಡಲದು ಚೆಂದ ಚೆಂದ
ಚುಚ್ಚುವ ಮುಳ್ಳಿನಲ್ಲಿ ನಲಿಯುವುದೆ ಅದರ ಅಂದ
ಮಂದಾರ ಪರ್ವತದ ಬಂಗಾರ ಬಳ್ಳಿ ನೀನು
ಮಿಂಚುವುದನು ಬಿಟ್ಟು ಸಿಡಿಲೊಡೆದೆ ಯಾಕೆ ಹೇಳು?

ಸಾಗರವು ಧುಮ್ಮಿಕ್ಕುವುದು ಅದರಿಷ್ಟಿದಂತೆ
ನೀನಗು ಇಷ್ಟವಾಹಿತೆ ಬದುಕಿನಲಿ ಧುಮ್ಮಿಕ್ಕುವುದು
ಸಾಗರಕೆ ಸಂಕಟವಿಲ್ಲ ನೊಂದವರ ಚಿಂತೆ ಇಲ್ಲ
ನೀನಾಗದರು ಇರಬೇಕಿತ್ತಲ್ಲವೇ ಪ್ರೀತಿಸಿದವನು ನಾನೆಂದು!

ಯಾರ ಬಯವು ಇಲ್ಲದೆ ಹಾರುವ ಹಕ್ಕಿಯನು
ಕಲ್ಲು ಬಿಸದೆ ಬಡಿದುರುಳಿಸಿದಂತೆ ನನ್ನ ಬಾಳು
ನೆಲಕೆ ಬಿದ್ದು ನರಳುವಾಗ ಕನಿಕರವು ಬರಲಿಲ್ಲವೆ?
ಕಾಲಿನಲ್ಲಿ ತುಳಿಯುವುದು ಹೆಣ್ಣೆ ನಿನಗೆ ತರವೇ?

ಕಣ್ಣೀರಿಗೆ ಬೆಲೆ ಇಲ್ಲ ನನಗೂ ತಿಳಿಯುತಿದೆ ಈಗ
ಕೊಳ್ಳುವವರಿಲ್ಲ ಅದನಾರು ಇಲ್ಲಿ ಎಂದು
ಆದರು ಜಾರುತಿವೆ ನಿನ್ನನೊಮ್ಮೆ ಕಾಣಲೆಂದು
ವಿರಹದೂರಿನ ಹಂತ್ಯ ದಾರಿ ತಿರುವಿನಲ್ಲಿ

ನೆನಪುಗಳ ನೋವಿನ ಮೆರವಣಿಗೆ
ಸಾಗುತಿದೆ ಸ್ಮಶಾನದಾರಿ ಸ್ತಬ್ದ ಸ್ತಬ್ದ
ನೀ ಬಳಸಿ ಹೋದ ಹೃದಯ ವೀಣೆ
ಮಿಡಿಹದಿನ್ನು ಪ್ರೇಮ ವೀಣೆ ನಿನ್ನ ಹಾಣೆ

ಯಾವ ಜನ್ಮದ ಸೇಡು ನಿನ್ನದೇಳು
ಯಾವ ಜನ್ಮದ ಪಾಪ ನನ್ನದೇಳು
ಮಿಂಚಿನಂತೆ ಬಂದು ಸಿಡಿಲಾಗಿ ಎರಗಿದವಳೆ
ಹೆಣ್ಣು ಮಾಯೆ ಎಂಬುವುದನು ಧೃಡಪಡಿಸಲೆಂದೆ ಬಂದೆಯಾ?

ಹೋಗುದೊದೆ ಹಿಡಿ ಮಣ್ಣನ್ನಾದು ಹಾಕಿ ಹೋಗು
ಅಂತ್ಯಸಂಸ್ಕಾರದಲ್ಲಿ ನೆನಪುಗಳನ್ನು ಊತು ಹೋಗು
ಘೋರಿ ಕಟ್ಟಬೇಕು ನೀನು, ಅದರ ಮೇಲೆ ನಿನ್ನ ಹೆಸರು
ನೀನೆ ಬರೆಯಬೇಕು ಪ್ರೀಯೇ, ನನ್ನ ನಿನ್ನ ಪ್ರೇಮ ಕಥೆಯ
ಬಂದವರಿಗೆ ಹೇಳಬೇಕು, ಪ್ರೀತಿಯ ಆಳ ಎಷ್ಟೆಂಬುವುದನು...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 09:58 pm
Download App from Playstore: