"ಪ್ರೇಮಾಭಿಷೇಕ ನನ್ನೊಲವಿಗೆ ಪ
ಅಂದಗಾತಿ ಚೆಲುವಮ್ಮ ನಗುವಿನೋಡತಿ ನೀನಮ್ಮ
ನಿನ್ನ ಅಂದ ಹೋಗಳುವ ಸಂತ ನಾನಮ್ಮ
ಅಂದಗಾತಿ ಚೆಲುವಮ್ಮ ಚಂದ್ರಮುಖಿ ನೀನಮ್ಮ
ನನ್ನ ಪ್ರೇಮ ಹೃದಯದ ಗುಡಿಗೆ ಕಳಸ ನೀನಮ್ಮ
ಅರಳಿ ನಿಂತ ಗುಲಾಬಿಯಲಿ ನಿನ್ನ ನಗುವ ಕಂಡೆನಮ್ಮ
ಪನ್ನಿರಿನಭಿಷೇಕದ ಮಕರಂದಕೆ ಲಜ್ಜೆ ನೀನಮ್ಮ
ಅರಳೊ ಮಲ್ಲಿಗೆಗೆ, ಮೀನುಗೊ ತಾರೆಗೆ
ಸುರಿಯೋ ಝರಿಮಳೆ ಹನಿಗೆ ನಿನ್ನ ಹೆಸರೇ ಚಂದವಮ್ಮ
ನಯನಗಳಲಿ ನಲಿಯುತಿರುವ ಮುಂಜಾವಿನಲ್ಲಿ
ನಿನ್ನ ಗಲ್ಲದ ಕೆಂಬಣ್ಣಕೆ ರಂಗೊಲಿಯ ಚಿತ್ರಾವಳಿ ಅಲ್ಲಿ
ವೀಣೆಯು ಫಲುನಿಕಿದೆ ನೀ ನುಡಿಯುತಿರಲು
ಕಾಲ್ಗೆಜ್ಜೆಯ ಗಲಿರು ಗಲಿರು ನಾದ ನೀ ನಡೆದಾಡುತಿರಲು
ಶಶಿಧರನ ನಾಡಿನಲಿ ತಾರೆಗಳೆ ಇಲ್ಲ
ನಿನ್ನ ಕಾಲ್ಗೆಜ್ಜೆಯಲಿ ಸೇರಿ ಸಪ್ತಸ್ವರ ಹೊಮ್ಮುತಿವೆಯಲ್ಲ
ಪಾದವನಿಟ್ಟೊಡೆ ಪುಳಕಿತ ವಸುಂಧರೆಯ ತನು ಮನ
ಸ್ಪರ್ಷದ ಪರಿಯೇನು ಇದು ಝೇಲ್ಲನೆ ಜೈಂಕಾರ ಗಾನ
ಕೈ ಬಳೆಯಲ್ಲವದು ಗಂಧರ್ವ ಲೋಕದ ಲಹರಿ
ಹಂಸದ ನಡಿಗೆಯ ಬಳುಕುವ ನವಿಲಿನ ಕುವರಿ
ಕಲರವದೊಳು ನದಿಯು ಅರಿಯುತಿದೆ ಕಂಡು
ಇವಳೊಲವಿನ ಮಾಘ ಮಾಸದ ಚಿತ್ರಾವಳಿಯ ಹಿಂಡು
ಎದೆಬಿಗಿತದ ರವಿಕೆಯ ಹಂಚಿಗೆ
ಕಾಮನ ಬಿಲ್ಲಿನ ಕುಂಚದ ಕುಸುರಿಗೆ
ನುಣುಪು ನಡುವಿನ ನೆರಿಗೆಯ ಬಿಗಿತಕೆ
ಒಲವಿನ ಬಟ್ಟಲು ತುಳಿಕಿದೆ ತನುವಿಗೆ
ಸ್ವರ್ಗಸೀಮೆಯ ಸೀರಿವಂತೆ ಸಿಂಗಾರಿ
ಹೃದಯ ಗುಡಿಯಲಿ ನೆಲೆನಿಂತ ಬಂಗಾರಿ
ನಿನ ಪಾದಗಳ ಸೋಕಿದಲ್ಲಿ ಎಳೆಗರಿಕೆಗೂ ಯೌವನ
ಸೃಷ್ಟಿಸಿದ ಬ್ರಹ್ಮನಿಗು ನಿನ ಕಂಡರೆ ಕೌತುಕದ ಕವನ
ಪ್ರೇಮಾಭಿಷೇಕ ನನ್ನೊಲವಿಗೆ ಪಟ್ಟಾಭಿಷೇಕ
ನನ್ನೆದೆಯಾಳೊ ಮಹಾರಾಣಿಗೆ ಕ್ಷೀರಾಭಿಷೇಕ
ಹೃದಯ ಗುಡಿಯ ರಾಜ್ಯೇಶ್ವರಿಗೆ ಭಾವಾಭಿಷೇಕ
ನನ್ನಾಳೊ ನನ್ನೆದೆಯ ದೇವತೆಗೆ ಒಲವಿನಾಬೀಷೇಕ...,
-ಸಿದ್ದುಯಾದವ್ ಚಿರಿಬಿ...,
- ಸಿದ್ದುಯಾದವ್ ಚಿರಿಬಿ
15 Dec 2016, 10:05 pm
Download App from Playstore: