~~~¶ಗಜ್ಹಲ್¶~~~

ಮತ್ತದೆ ಮಾದಕ ಹೆಜ್ಜೆ ಕರೆತಂದಿದಿಂದು ನಿನ್ನ ಮನದಂಗಳಕೆ
ಮತ್ತೆ ಭಯದ ಬಯಲಿನಲಿ ನಡುಗುತಿದೆ ಮನ ಸೊಲುವೆನೆಂದು

ನಿನ್ನ ಮನವನೊಮ್ಮೆ ಕೇಳಿಬೀಡು ಮತ್ತೆ ತೋರೆದೊಗುವದೇನು?
ಮತ್ತೆ ತಲೆ ತಗ್ಗಿಸಭಾರದು ನಾನು ಪ್ರೀತಿಯ ಸೋಲಿನಲಿ

ಬದುಕು ನನ್ನನ್ನಿಲ್ಲಿ ತಂದು ನಿಲ್ಲಿಸಿದೆ, ನೀ ಬರಬೇಡ ಜೊತೆಗಿಂದು
ನೀ ಮಾಯಾವಿ, ಮೊಸದ ಚಂದಗಾತಿ, ಸಾಯಿಸಬೇಡವೆ ನನ್ನ;

ಬದುಕೊಂದು ಕದನ ನಾ ಜಯಿಸಬೇಕಿದೆ ಅದನ
ಮತ್ತೆ ಸೊಲಿನ ಸುಳಿಯಲಿ ಸಿಲುಕಿಸಿ ನಲುಗಿಸದಿರೇನ್ನ

ನೋಯುತಿಹವು ಎಷ್ಟೊ ಮನಸುಗಳು ನಿನ್ನ ನಂಭಿ ಏ ಪ್ರೀತಿಯೇ
ಇನ್ನಾದರು ನಿಲ್ಲಿಸು ನಿನ್ನಾಟವನು ಮನಸು ಮಸಣವಾಗುವ ಮುನ್ನ

ಬದುಕಿನ ಚಿಲುಮೆಯಾಗು, ನೀ ಜೀವದ ಗೆಲುವಾಗು,
ಅದನು ಬಿಟ್ಟು ಸ್ಮಶಣದ ತವರಾಗದಿರು ಪಾಪಿ ಪ್ರೇಮವೇ;...,

-ಸಿದ್ದುಯಾದವ್‌ ಚಿರಿಬಿ

- ಸಿದ್ದುಯಾದವ್ ಚಿರಿಬಿ

15 Dec 2016, 10:14 pm
Download App from Playstore: