¶ಕನ್ನಡದ ಕಲಿಗಳೆ¶

ಕನ್ನಡದ ಕಲಿಗಳೆ ಗಡಿನಾಡ ಹುಲಿಗಳೆ
ತೊರೆದು ಬನ್ನಿರೆಲ್ಲಾ ಜಾತಿ-ಮತವಾ
ನಾಡಿನೋಡಲಿಗಿಂದು ಕುತ್ತುಬಂದೊದೆಗಿವುದು
ಅಭಿಮಾನದ ಅಪ್ಪುಗೆಯ ತಬ್ಬುತಾ ಬನ್ನಿ

ಜಾತಿಯ ನೆಪ ಒಡ್ಡಿ ಬೇದದ ವಿಷ ಬಿತ್ತಿ
ಸಾಮರಸ್ಯದ ಗುಡಿಯ ಕೆಡವುತಿಹರು
ನಮ್ಮದೇ ಅನ್ನ, ಗಂಧ-ಗಾಳಿಯನುಂಡು
ಉಂಡಮನೆಗೆರಡು ಬಗೆಯಲೊಂಚುತಿಹರು

ಕಾವೇರಿಯಿಂದ್ ಗೋದಾವರಿಯವರೆಗೆ
ಹಬ್ಬಿರುವುದು ನಾಡದೇವಿಯ ಕರುಳ ಬಳ್ಳಿ
ಓ ಕರುನಾಡ ಕಲ್ಕಿಗಳೆ ನಾಡನುಳಿಸ ಬನ್ನಿ
ಜಾತಿ-ಮತ ಪಂಥಗಳ ತೊರೆದು ನೀವ್ ಬನ್ನಿ

ತಾಯಿ ರಾಜೇಶ್ವರಿಯು ಬೆತ್ತಲಾಗುವ ಮುನ್ನ
ಎಚ್ಚೆತ್ತು ಬನ್ನಿ ಮಲಗಿದವರನು ಬಡಿದೆಬ್ಬಿಸಿ ತನ್ನಿ
ಅಭಿಮಾನ ಗರ್ವದಲಿ ಮೈ ಮರೆತು ಮಲಗದಿರಿ
ಕುತ್ತುಬಂದಿಹಿವುದು ಎಚ್ಚೆತ್ತು ಹೋರಾಡ ಬನ್ನಿ

ಕನ್ನಡಿಗರೊಕ್ಕಟ್ಟು ಧೀರ ದಿಕ್ಷೆಯ ಛಲ ತೊಟ್ಟು
ಪ್ರಾಣವನೆ ಪಣಕಿಟ್ಟು ಗಡಿಯಾಚೆ ನೂಕಬನ್ನಿ
ಈ ಜನುಮ ಸಿಕ್ಕಿಹುದು ತಾಯಿ ಋಣ ತಿರಿಸಲು
ಭುವನೇಶ್ವರಿಯ ಭವ್ಯ ಸಾಮ್ರಾಜ್ಯವನುಳಿಸ ಬನ್ನಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 10:42 pm
Download App from Playstore: