ಎರಡು ದಿನ
ಯಾರ ಅರಿವಿಗೂ ಬಾರದಂತೆ
ನಾನೊಬ್ಬನೇ ಎರಡು ದಿನ
ಒಬ್ಬಂಟಿಯಾಗಿರಲು ಆಶಿಸುವೆ
ಯಾರೂ ಗೊತ್ತಿಲ್ಲದೆಡೆಯಲ್ಲಿ
ಏನೂ ಕಾರಣವಿಲ್ಲ
ಯಾರಲ್ಲಿಯೂ ಬೇಸರವಿಲ್ಲ
ಆವುದೋ ಒಳದನಿಯ ಆಸೆಯಿದು
ಯಾವ ಅನುಸೂಚಿಯಿಲ್ಲದಂತೆ
ಯಾವ ಆತಂಕವೂ ಬೇಡ
ಹೇಗೆ ಎಲ್ಲಿರುವೆನೆಂದೋ
ಎರಡೇ ಎರಡು ದಿನದಿ ತಿರುಗಿ ಬರುವೆ
ಮತ್ತೆ ನಿಮ್ಮೊಳಿರುವೆ ಎಂದೂ
ಕ್ಷಮಿಸಿಬಿಡಿ
ಯಾರಿಗೂ ಹೇಳಲಿಲ್ಲ
ಎಲ್ಲಿಗೆ ಪಯಣವೆಂದು
ನನಗೂ ಗೊತ್ತಿಲ್ಲ
ಹೃತ್ಪೂರ್ವಕ ಹಾರೈಸಿರೇ
ನಾ ಕ್ಷೇಮವಾಗಿರಲೆಂದೂ
ಹೋಗಿ ಬರುವೆ
ಚಿರನಗುವಿನಲಿ ......
......ಎಂದೂ ನಿಮ್ಮವನೇ ನಾನು!
- Prasanna kumar K S
15 Dec 2016, 11:35 pm
Download App from Playstore: