ವಿಜಯಭೇರಿ

ತನ್ನ ಸುಡದಿರೆ ಹಣತೆ
ಬೆಳಕ ನೀಡದು ಗೆಳತಿ
ಬೆಳಕ ನೀಡದ ಹಣತೆ
ದಾರಿ ತೋರದ ಪ್ರಣತಿ!!

ಇಲ್ಲದರಿಯುವ ಮೊದಲು
ಇದ್ದು ಅರಿಯುವರಿಲ್ಲ
ಕಳೆದಿರುವ ಸಮಯವದು
ಮತ್ತೆ ಮರಳುವುದಿಲ್ಲ!!

ಕಡಲ ದಡದಲಿ ಮನೆಯ
ಮಾಡ ಬಯಸಿದರಿನಿಯ
ಅಲೆಯು ಅಪ್ಪಳಿಸಿತೆಂದು
ಬೆದರಿ ಓಡಿದರೆಂತು!!

ಕುದುರೆ ಲಾಳದ ಎದಿರು
ಮದುರಿ ಕೂರುವ ಬದಲು
ಏರಿ ನಡೆದರೆ ಸವಾರಿ
ನೀನಾಗುವೆ ವಿಜಯಭೇರಿ!!

- ಪಿ.ಜಿ.ಜ್ಯೋತಿ

15 Dec 2016, 11:44 pm
Download App from Playstore: