ತಾಯಿ

ಯಾರು ಬರೆದವರು
ನಿನ್ನ ಚಿತ್ತದ ಬರಹ!!
ತೀರಿಸಬಹುದೇ ನೀನು
ಹೆತ್ತ ತಾಯಿಯ ಋಣವ!!

ಕಂಡು ಕಾಣದ ಅವಿವೇಕ
ಹೊದ್ದಿ ಮಲಗಿಹುದು!!
ಹುಚ್ಚು ಯೋಚನೆಗಳು
ಹೆಚ್ಚಿ ಕುಳಿತಿಹುದು!!

ನೂರು ಜನ್ಮ ಎತ್ತಿ
ಬರುವಿಯೆಂದರೂ ನೀನು!!
ಕರುಳ ಬಂಧ ಇಲ್ಲದೇ
ಆದೀತೆ ನಿನ್ನ ಜನನ!!

ಕೆಟ್ಟ ಮಕ್ಕಳ ಹೆತ್ತ ತಾಯಿಯು
ಕೇಡ ಬಯಸಳು ತನ್ನ ಕಂದಗೆ!!
ನಿನ್ನ ನಗುವಲಿ ತನ್ನ ನೋವನು
ಮರೆತು ನಗುವಳು ನಿತ್ಯ ಹರುಷದಿ!!

- ಪಿ.ಜಿ.ಜ್ಯೋತಿ

16 Dec 2016, 12:03 am
Download App from Playstore: