ವಿಪರ್ಯಾಸ

ಏನಿದೀ ವಿಪರ್ಯಾಸ..
ಕಾವೇರಿ ತಾಯಿಗೆ ಸಾಲು ಸಾಲಿನ ಸಂಕಟ..

ಬೇಧ- ಭಾವಗಳ ಸುಳಿವಿರಬಾರದೆಂದು
ನ್ಯಾಯ ದೇವತೆಯು ತನ್ನ ಕಣ್ಣ
ಬಟ್ಟೆಯೊಳಗೆ ಸೆರೆ ಮಾಡಿಕೊಂಡಳು...
ನ್ಯಾಯಕ್ಕೆ ಮುಸುಕು ಹಾಕಿಹರಿಲ್ಲಿ,
ಅನ್ಯಾಯಕ್ಕೆ ಗೆಲುವ ಉಣಬಡಿಸಲು..

ಏನಿದೀ ವಿಪರ್ಯಾಸ,
ಕಾವೇರಿಗೇ ಕೇಸಾ???

ಬತ್ತಿ ಹೋಗುತಿದೆ,
ಕಾವೇರಿಯ ಒಡಲು...
ಸತ್ತು ಬರಿದಾಗುತಿದೆ,
ಕಾವೇರಿಯ ಮಡಿಲು..

ಆದರೂ ಕರುಣೆಯಿಲ್ಲ,
ಸರಕಾರವು ಮಿಡಿಯಲೇ ಇಲ್ಲ.. //2//

ಶಾಂತಿಯ ಪಾಲಿಸಿದರೆ ನ್ಯಾಯದ ಕೊಲೆ,
ಪೈಪೋಟಿಗೆ ನಿಂತರಲ್ಲೇ ರಕುತದಾ ಹೊಳೆ..

ಕಾವೇರಿ ಮಡಿಲು ಬರದೊಳ ಬೀಳುತಿದೆ..

ಬೇಡದ ಮನಸಿನಲ್ಲಿ ಕಾವೇರಿ,
ಕೆ.ಆರ್.ಎಸ್ ಗೆ ವಿ.ಆರ್.ಎಸ್
ಕೊಡುವ ಸಂಭವ ಮೂಡಿದೆ.

ಯಾರೋ ದೋಚುತಿಹರು
ಕನ್ನಡದ ಆಸ್ತಿಯಾ..
ಸುಮ್ಮನೆ ಬಿಡಬೇಕೆ
ಈ ದುರಾಸೆಯಾ..

ಕಾವೇರಿ ಬೆಡಗು ಸೊರಗಿ ಹೋಯಿತಿನ್ನು,
ಮರುಕವೇ ಬಾರದೆ!! ನರಕವೇ ರೈತರಿಗಿನ್ನು..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

16 Dec 2016, 11:31 pm
Download App from Playstore: