ಭೂತಾಯಿಯ ತೊಳೆವ ಮಳೆಯೇ

ಇಳೆಯ ಕೊಳೆಯ ತೊಳೆಯುತಿರುವ ಮಳೆಯೇ,
ನೀ ಸುರಿಯಲು ಶುಭ್ರವೂ ಆಕಾಶವು,
ಕೊಳೆಯ ತೊಳೆದು ಕಳೆಯ ಪಡೆದು ನಲಿಯುತಿಹುದು ಪ್ರಕೃತಿಯೂ.

ನೋಡಲೋಂದು ಸೊಬಗು ನೀ ಸುರಿದು ತೊಳೆದ ಭೂಗಗನ,
ನೋಡಿ ನಲಿಯುತಿಹುದು ಈ ನನ್ನ ಮನ.

ಸುರಿದು ಮನುವಿನ ತನುವ ತೊಯ್ವ ಮಳೆಯೇ,
ಮನದ ಕೊಳೆಯನು ತೊಳೆಯಲಾರೆಯೆ!?

ರಕ್ತ ಸಂಬಂದಿಗಳೆ ದ್ವೇಷಿಗಳಿಲ್ಲಿ,
ಸ್ನೇಹಿತರೆ ಬೆನ್ನ ಹಿಂದೆ ಇರಿಯುವರಿಲ್ಲಿ,
ಕಂಡವರೇ ಹೀಗಾದರೆ ಕಾಣದವರ ಕಥೆ ಇನ್ನೆಲ್ಲಿ.

ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹಗಳೇ ಮನುಷ್ಯನ ಆಳುತಿರಲು
ನಿಜವೇ ಪ್ರೀತಿ, ಮಮತೆ, ಕರುಣೆಗಳಿಗೆ ಇನ್ನೂ ಜಾಗವಿರಲು ಜಗದಲಿ,

ಮನುಜನೇ ಮನುಜನ ಕೊಂದು ಬದುಕುತಿರಲು,
ಸಾಧ್ಯವೇ "ಬದುಕಿ ಬದುಕಲು ಬಿಡಿ " ಎನ್ನುವ ಮಾನವತವಾದವಿರಲು.

ಮನಸ್ಸೆಂಬುದೇ ಇಲ್ಲದೇ ಬದುಕುವವ ಮನಸಾಕ್ಷಿಗೆಂದಿಗೂ ತಲೆಬಾಗುವುದಿಲ್ಲವೆಂಬುದೂ ನಿಜ.

ಮಳೆಯೇ,
ಈ ಪವಿತ್ರ ಭೂತಾಯಿಯ ತೊಳೆದರೇನು ಬಂತು ಫಲ ,
ಮನುಷ್ಯನ ಕಲ್ಮಶ ಮನಸ ತೊಳೆದು ತೋರಿಸು, ನೀನು ಆಗ ಸಫಲ.

ಮನದ ಕೊಳೆಯ ತೊಳೆದು ನೋಡು ಇಳೆಯ,
ಆಗ ನೀನು ಕಾಣುವೆ ಅತಿ ಸುಂದರ ಸೊಬಗಿನ ಭೂತಾಯಿಯ.

- ಶ್ರೀಕಾವ್ಯ

19 Dec 2016, 11:02 am
Download App from Playstore: