ನಾನು
ನನ್ನ ನಾ ಅರಿಯುವ ಮುನ್ನ
ಅರ್ಧ ಬದುಕು ಕಳೆದಾಯ್ತು
ಮನದ ಆಸೆ ನವಿಲಾಗಿ ನರ್ತಿಸೋ ಮುನ್ನ
ಸಂಸಾರಕ್ಕೆ ಕಾಲಿಟ್ಟಾಯ್ತು
ಸಂತೋಷವ ಸಂಭ್ರಮಿಸೋ ಮುನ್ನ
ಕರ್ತವ್ಯ ಪಾಲಿಸಿ ಆಯಿತು
ನಾ ಕನಸು ಕಾಣೋ ಮುನ್ನ
ಮಕ್ಕಳ ಆಸೆ ಮುಖ್ಯವಾಯ್ತು
ಮುಗಿಯಿತು ಜೀವನ ಅನ್ನೋ ಮುನ್ನ
ಮನದ ಮೂಲೆಯಲ್ಲಿದ್ದ ನಾನು
ಮತ್ತೆ ಇಣುಕಿ ಕವನ ಬರೆದಾಯ್ತು
ನನ್ನ ನಾ ಅರಿತಾಯ್ತು........
.......
ಕವಿರಾಜ
- kavita Rajesh
19 Dec 2016, 04:51 pm
Download App from Playstore: