ಸಂಭ್ರಮ...
ಧುಮ್ಮಿಕ್ಕುವ ಪ್ರೇಮ ಧಾರೆಗೆ
ಮೈ ಒಡ್ಡುವ ಸಂಭ್ರಮ
ನಿನ್ನ ಕಣ್ಣಿಗೆ ನನ್ನ ಬಿಂಬವ
ಒಪ್ಪಿಸುವ ಸಂಭ್ರಮ
ಎದೆಯ ಬಡಿತ ತಾಳತಪ್ಪಿ
ನಿನ್ನಲ್ಲಿಗೆ ಬರುವ ಸಂಭ್ರಮ
ಹೂತುಟಿಯ ಜೇನ ಹೀರಿ
ಮತ್ತಲಿ ಮೈಮರೆವ ಸಂಭ್ರಮ
ಎದೆಯಂಗಳದಿ ನಲಿವ
ನಿನ್ನ ಗೆಜ್ಜೆನಾದ
ಆಲಿಸುವ ಸಂಭ್ರಮ
ನಿನ್ನ ಭಾವದಳೆಯ
ಉಯ್ಯಾಲೆಯಲಿ ಎನಗೆ
ಜೀಕುವ ಸಂಭ್ರಮ
ಸಂತೈಸುವ ಈ
ಮಡಿಲಲ್ಲಿ ಮನ
ಹಗುರಾಗುವ ಸಂಭ್ರಮ
ಈ ಸಂಭ್ರಮಗಳ
ಸಂಗಮ ನೀನಾದರೆ
ಬಾಳು ಒಲವ
ತುಂತುರ ರಿಂಝಿಮ...
- Indushekar Chinivar
20 Dec 2016, 08:50 am
Download App from Playstore: