ನಾನೊಂದು ಮರವಾಗಿದ್ದರೇ?.

ನಾನೊಂದು ಮರವಾಗಿದ್ದರೆ
ಜಗದ ಜನರ ವಾಯುವಾಗುತ್ತಿದ್ದೆ
ಜೀವ ಸಂಕುಲದ ಮನೆಯಾಗುತ್ತಿದ್ದೆ
ಎತ್ತರೆತ್ತರಕ್ಕೆ ಬೆಳೆದು ನೇರಳಾಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?

ತಿಂಗಳಬಾಡಿಗೆ ಕೇಳಿಲ್ಲ ಪಕ್ಷಿವಾಸಿಸಲು
ಹಣವ ಪಡೆಯಲಿಲ್ಲ ಫಲಹಾರಿಗಳಿಗೆ
ಆಸರೆಯಾಗುವೆ ಸ್ನೇಹಿತ ಬಳ್ಳಿಗಳಿಗೆ
ಜಗಕೆ ನಿಸ್ವಾರ್ಥಿ ಕುಟುಂಬವಾಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?

ಔಷಧಿಯಾಗುತ್ತಿದ್ದೆ ಹಲವು ರೋಗಿಗಳಿಗೆ
ಉಪಕರಣವಾಗುತ್ತಿದ್ದೆ ಕಟ್ಟುವ ಮನೆಗೆ
ಸಮಾರಂಭಗಳಿಗೆ ತೋರಣವಾಗುತ್ತಿದ್ದೆ
ಮೋಡತರಿಸಿ ಮಳೆ ತರುವ ಗಾಳಿ ಆಗ್ವೆ
ನಾನೇಕೆ ಮರವಾಗಲಿಲ್ಲ ಓ ದೇವರೆ?

ಯಾರಿಗೂ ಬೇಡದೇ ಸ್ವಾವಲಂಬಿ ಆಗ್ವೆ
ಸತ್ತರೆ ಭೂಮಿಯ ಖನಿಜಗಳಾಗುತ್ತಿದ್ದೆ
ಸಂಪನ್ಮೂಲವಾಗುವೆ ದೇಶದ ಪ್ರಗತಿಗೆ
ಈಭೂಮಿಯ ಸುಂದರ ಸೀರೆ ಆಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?

ನಿಮ್ಮವ ..ಶರಣ್ ಪಾಟೀಲ್.!!

- Sharanpatil

20 Dec 2016, 03:25 pm
Download App from Playstore: