ಎನ್ನವ್ವ

ಕರಿಮುಖದ ಎನ್ನವ್ವ
ನಾ ಕಂಡ ಜಗದಾಂಬ ..
ಬಿಳಿಬಣ್ಣದ ಹತ್ತೀಯು
ನಾನಾಗಿ ಬೆಳೆದಿರಲು
ನಾನಾಗೆ ಬೆಳೆದೇನಾ .. ???
ಇಲ್ಲ ಇಲ್ಲ
ಅವಲಂಬಿತು ಕರಿಮಣ್ಣ..
ಸಂಸಾರದ ಬೀಳೇಳುಗಳಲಿ
ಕಂಡಳೆಷ್ಟೋ ಕಹಿಗುಡುಗ
ಆದಾರು ಬೆಳಗಿಸಿದಳು
ನನ್ನವ್ವ ... ಕಟುಜಾಣೆ ...
ಜಗವೆಂದಿತು , ತಾಯಿ
ಮನುಜ ಶ್ರೇಷ್ಠವೆಂದು ..
ನೋಡಿದರೆ ನಾವೊಪ್ಪೆವು
ಎನ್ನವ್ವನ ಹೊರಮುಖವ..
ಆದರೆ ನಾ ಕಂಡೇನು ಎನ್ನವ್ವಳ
ಅಂತರಂಗದ ಶುಭ್ರಪುಟವ ..
ಅವಳೆದುರೇ ನಾ ಗುಡುಗಲು
ಆನಂದಿಸಿದಳು ಎನ್ನವ್ವ ..
ನಾ ಬಿಟ್ಟರು ಮಗ ಉಳಿಯುವ
ಎಂದವಳ ಮನಮಂದಿರದಿ ..

- ಆರ್.ಎಸ್.ಕೆ

20 Dec 2016, 03:44 pm
Download App from Playstore: