ವರನಾಡು

ಶ್ರೀ ಗಂಧದನಾಡು, ಕವಿಋಷಿಗಳ ಬೀಡು
ಸಾಂಸೃತಿಕ ಶ್ರೀಮಂತೆ ನೀ ತಾಯಿ ಕನ್ನಡತಿ
ಶಿಲ್ಪಕಲೆಗಳ ಸಿಂಗಾರಿ
ಸಂಸ್ಕೃತಿಯ ಭಂಡಾರಿ ,
ವರನಾಡು ಭಾರತಿಗೆ
ನೀ ತಾಯಿ ಕರಿಮಾಯಿ.
ಬೇಲೂರು ಹಳೇಬೀಡು ಕಲೆಶಿಖರದ ಒಡತಿ
ನೀನಾದೆ ರಮ್ಯೆ ಸುಂದರೌತಣದ ಬೆಡಗಿ
ಸಂಗೀತ ಚಿತ್ರಕಲೆ ಸೊಗಸುಣಿಸಿ, ಮೈ ನವೀರೆಳಸಿ ,
ಸಾಹಿತ್ಯ ಶ್ರೀಮಂತ ಕೊಡಚಾದ್ರಿ ಶಿಖರಗಳಲಿ
ಸಮೃದ್ಧಿಯ ಬಾಳೆಸದು ನೀ ಬೆಳಗಿದೆ ನದಿಮಣಿಗಳ.
ಗಂಗ ಕದಂಬ ಚಾಲುಕ್ಯವಿರೂಪಾಕ್ಷಗಳದಿ
ವೈಭವದ ಕಮ್ಮಿತ್ತುನಾಡಾಗಿ ನೀನಿರಲು
ಹಾರಿಸಿದರು ನಿನ್ನ ಕೀರ್ತಿ ಪತಾಕೆಯನ್ನು..
ಕಣ-ಕಣವು ಬೆಳ್ಳಿ
ಸಿರಿಕವಿಗಳ ಸರಪಳಿ.

- ಆರ್.ಎಸ್.ಕೆ

20 Dec 2016, 07:17 pm
Download App from Playstore: