ಮೌನರಾಗ

ನದಿಗೆ ಸಾಗರವು ಹೇಳುತಿದೆ
ಯಾರು ಎಷ್ಟು ಆಳವೋ ಅವರು ಅಷ್ಟೇ ಮೌನ
ನನ್ನ ಪ್ರೀತಿಯೂ ಸಾಗರದಷ್ಟೇ ಆಳ
ಆದರೆ ಅದು ಮೌನ!

ನಾನು ಹೇಗೆ ವ್ಯಕ್ತಪಡಿಸಲಿ ಕಡಲಿನಂಥ ಭೋರ್ಗರೆತ
ಹೇಗೆ ಸಾದರಪಡಿಸಲಿ ಕೋಲ್ಮಿಂಚಿನಂತಹ ಸೆಳೆತ
ಹೇಗೆ ತೋರಿಸಲಿ ಹೃದಯದ ಗುಡುಗು
ಅದುವೇ ಈ ಮೌನರಾಗದ ಅನುರಾಗ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

20 Dec 2016, 09:13 pm
Download App from Playstore: