~~~¶ಹೊಡೆದ ಕೊಳಲು ನಾನು¶~~~

ಹೊಡೆದ ಹೊದ ಕೊಳಲು ನಾನು
ಸೇರಿಸಿ ನುಡಿಸಲಾಗದಿನ್ನು
ಹರಿದ ತಂತಿಯ ವೀಣೆಯನೆಂದು
ನುಡಿಸಬಾರದು ಹೊಮ್ಮದು ರಾಗವು
ಪ್ರೇಮದ ಉಸಿರನಿತ್ತು ಭಾವನೆಗಳ ತುತ್ತನಿತ್ತು
ನುಡಿಸಿದಳಂದು ಕೊಳಲನು
ಬಿರುಸು ನುಡಿಯ ಬಂಡೆಗಿಂದು ಎಸೆದು ಎಲ್ಲೊ ಹೋದಳು

ಮಾತು ಮಧುರ, ಮನಸು ಸುಮಧುರ
ನಯನಗಳಲೆ ಕವಿತೆ ಬರೆದು
ಕೆಂದುಟಿಗಳ ನಡುವೆ ಬೀಗಿದು
ನುಣುಪು ಬೆರಳು ಕೊಳಲಿಗೊತ್ತಿ
ಪ್ರೇಮಗಾನ ಹೊಮ್ಮಿಸಿ ಮನಸು ತಣಿಸಿ ನಲಿದಳು
ಮಡಿಲ ಮಗುವು ನಾನಾಗಿರಲು
ಕೊಡವಿ ಎದ್ದು ಹೋರಟಳು
ಕಾರಣವಿಲ್ಲ, ಕಾಣಲೆ ಇಲ್ಲ
ಅವಳು ಹೋದ ದಿಕ್ಕಲಿ

ಎಸೆದು ಹೋದ ಕೊಳಲು ನಾನು
ಒಡೆದ ಕೊಳಲು ಕೊಳುವರಿಲ್ಲ ಜಗದಲಿ
ಭಾವನೆಗಳ ಹೂಗಳೆಲ್ಲ ನಲುಗಿ ಹಸುನಿಗಲು
ಅವಳ ಪಾದದಿಂದ ಬಿಡುಗಡೆಯ ಪಡೆಯದಾದವು
ಒಡೆದ ಕೊಳಲನು ಕಣ್ಣ ಹನೀಯು ತೊಳೆಯಲು
ಮತ್ತೆ ಹಸಿರಾಗಿ ಚಿಗುರುವುದೇನು ಬೀದಿರು

ಅವಳು ಹೋದ ದಾರಿಯಲ್ಲಿ ಎಲ್ಲವು ಹಸಿರ ಹೊನಲು
ನಾನು ಇದ್ದ ಜಾಗವೆಲ್ಲ ಮುರಿದ ಗುಡಿಸಲಿನ ಕಾವಲು
ಮರೆತಳಿಂದು ಇತ್ತ ಚುಂಭನದ ಲೆಕ್ಕವನ್ನು ಚುಕ್ತಮಾಡದೋದಳು
ಬಳಸಿದ ಕೊಳಲ ಕೊರಳ ಸೀಳಿ ಮರಳಿ ಬಾರದೋದಳು....,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

22 Dec 2016, 07:54 am
Download App from Playstore: