"ಶ್ರೀಲಕ್ಷ್ಮೀ"

ಲಕುಮಿ ನೀನು ಚಂಚಲೆ
ಯಾರಿಗೂ ತಿಳಿಯಲಿಲ್ಲ
ನಿನ್ನ ವಿಚಿತ್ರ ಲೀಲೆ
ವ್ಯಾಮೋಹ ವಿಪರೀತ
ಸರ್ವರಿಗೂ ನಿನ್ನಮ್ಯಾಲೆ!
ಸೋಮಾರಿಗಳಿಗಿಲ್ಲ ನಿನ್ನ ಪ್ರೀತಿ
‌ಶ್ರಮಿಕರಿಗೆ ನೀನೆ ಒಡತಿ
‌‌ ಭಕ್ತಜನಗಳಿಗೆ ನೀನು ದೇವತೆ
ನಿನ್ನಲ್ಲಿವುದು ಸರ್ವದೇವತೆಗಳ
‌‌‌ ‌ ‌ ‌ ‌‌ಶಕ್ತಿ!
ನೀನಿದ್ದರೆ ಮನೆಯಲ್ಲಿ
ಸಂತಸದ ಚಿಲುಮೆ
ಮನೆಯ ಮೂಲೆ-ಮೂಲೆಯಲ್ಲಿ
ಸಂಭ್ರಮದ ಸೆಲೆ
ಮನೆಯವರ ಮನದಲ್ಲಿ!
ಸಂಪನ್ನರಿಗೆ ನೀನು ಸಂಗಾತಿ
ನಿನ್ನಿಂದಲೆ ಸರ್ವರಿಗೂ ಸಂತೃಪ್ತಿ
ನಿನ್ನವಾಸದಿಂದ ಮನ:ಶಾಂತಿ
ಸಕಲಕಾರ್ಯಕ್ಕೆ ನೀನೆ ಒಡತಿ!
___________________________
*ಬಸವಪ್ರಿಯ*
(ರಾಹುಲ್ ನಿಮ್ಮ ಕೋರಿಕೆ ಗಾಗಿ)

- ಬಲವಂತ ಮೋರಟಗಿ(ಬಸವಪ್ರಿಯ)

22 Dec 2016, 01:58 pm
Download App from Playstore: