ಮಣ್ಣಲ್ಲಿ ಮಣ್ಣಾಗುವ ಮುನ್ನ..

ಮರದಲ್ಲಿ ಹುಟ್ಟಿ ಬೆಳೆದ ಹಣ್ಣನ್ನು
ಮರವೇ ಸೇವಿಸಿದ್ದರೆ?
ಮೋಡದ ಉದರದಲಿ ಹುಟ್ಟಿದ ಮಳೆ ನೀರನ್ನು
ಮೋಡವೇ ಕುಡಿದಿದ್ದರೆ?
ಹಾಲು ಕೊಡುವ ಕಲ್ಪೃಕ್ಷ ತನ್ನ ಹಾಲನ್ನು
ತಾನೇ ಕುಡಿದಿದ್ದರೆ?
ಫಸಲು ಕೊಡುವ ನೆಲ ಫಸಲನ್ನು
ತಾನೇ ಉಂಡಿದ್ದರೆ?
ಗಾಳಿಯನು ಹುಟ್ಟಿಸಿದ ಗಿಡ ಗಾಳಿಯನ್ನು
ತಾನೇ ಸೇವಿಸಿದ್ದರೇ?
ಮಣ್ಣಲ್ಲಿ ಮಣ್ಣಾಗುವ ಮುನ್ನ
ಇದನ್ನರಿತು ನನ್ನದು ನನ್ನಿಂದ ಎಂಬ ಜಂಬ ಬೇಡೆಂದ
ಬಸವ ಪ್ರಿಯ ರೇವಣಸಿದ್ದ.

ರಚಣೆ: ರೇನಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ:೯೦೦೮೦೬೦೯೧೮

- Revanasidda Goudar

22 Dec 2016, 04:49 pm
Download App from Playstore: