ಕೊನೆಯ ಸಂದೇಶ

ನೋಡುತ ನಿನ್ನಯ ಕೊನೆಯ ಸಂದೇಶ ಸುಮ್ಮನೆ ನಾನು ಕುಳಿತಿರುವೆ
ಮುಖದೊಳಗಿದ್ದರು ಮಂದಹಾಸವು ಮನದೊಳಗೇ ನಾನಳುತಿರುವೆ...
ಪ್ರೀತಿ ಪಯಣದ ಕೊನೆಯ ನಿಲ್ದಾಣ ನೀನೆ ಇಂದು ತೋರಿರುವೆ
ನೋವಾದರು ತುಸು ಹೆಚ್ಚೇ ಪ್ರೀತಿಸಿ ನೆನಪಲೆ ನಿನ್ನಯ ಜೊತೆಗಿರುವೆ...

ಹೃದಯದೂರಿನಾ ಗೌಡತಿ ನೀನು ಎಲ್ಲಾ ನಿಂದೆ ನಿರ್ಧಾರ
ಕಣ್ಣ ನೀರಿಗೂ ಕ್ಷಾಮ ಬಂದಿದೆ ಬಂದು ನೀ ನೀಡು ಪರಿಹಾರ...
ಕೊನೆಯ ಬಾರಿ ನಾ ಕೇಳುವೆ ನಿನ್ನ ಮಾಡುವೆಯಾ ಒಂದುಪಕಾರ
ಸಾಯಿಸಿ ನನ್ನನು ದೂರ ಹೋಗು ನೀ
ಅದುವೆ ಬಹುದೊಡ್ಡ ಸಹಕಾರ...

ಕೈ ಮುಗಿದು ನಾ ಬೇಡುವೆ ಹೇಳು ನಾ ಮಾಡಿದ ಆ ತಪ್ಪೇನು
ಒಮ್ಮೆ ಕೇಳಿಕೊ ಅಂತರಾತ್ಮವ
ನೀ ಮಾಡಿದ್ದು ಸರಿಯೇನು...?
ನಿನ್ನಾಣೆಗು ನಿಜ ಆರಾಧಿಸಿದೆ ದೇವತೆಯಂತೆ ನಾ ನಿನ್ನ
ಕಂಡು ಕಾಣದ ಹಾಗೆ ಕಾಲಲಿ ಒದ್ದು ಹೋದೆಯಾ ನೀ ನನ್ನ...

ನನಗೂ ಕೂಡ ಬರುವುದು ಕೋಪ ನಿನ್ನ ನೆನೆದಾಗ ಒಮ್ಮೊಮ್ಮೆ
ಸುಮ್ಮನಾಗುವೆ ಮನಸಲೆ ನೆನೆದು ನಿನ್ನ ನಸುನಗುವ ಮತ್ತೊಮ್ಮೆ...
ಕ್ಷಮಿಸು ಎನ್ನನು ತಪ್ಪಾಗಿದ್ದರೆ ಒಮ್ಮೆ ನಾಲಿಗೆಯ ತೊದಲಿಂದ
ಸಮ್ಮತಿ ಕೊಟ್ಟರೆ ಮರಳಿ ಪ್ರೀತಿಸುವೆ ಮಗದೊಮ್ಮೆ ನಿನ ಮೊದಲಿಂದ...

- ಜೀವಿ

22 Dec 2016, 05:56 pm
Download App from Playstore: