ಬಾಲ್ಯದ ನೆನಪು?
ಅಂದು ಬಳಪ ಕೊಡಿಸಲಿಲ್ಲ ಎಂದು ಅತ್ತ ನೆನಪು:
ಇಂದು ಮೊಬೈಲ್ ಕೊಡಿಸಲಿಲ್ಲ ಎಂದು ರೇಗಾಡಿದ ನೆನಪು!
ಚಿಕ್ಕಂದಿನಲ್ಲಿ ಸ್ಕೂಲಿಗೆ ಹೋಗಲು ಹೆದರಿ ಅಮ್ಮನ ಸೀರೆಯ ಕೊಂಗು ಸುತ್ತಿಕೊಂಡ ನೆನಪು,
ಹದಿಹರೆಯದಲ್ಲಿ ಅಮ್ಮ ಕಾಲೇಜಿಗೆ ಬಂದಾಗ ಮುಜುಗರ ಪಟ್ಟು ಅಮ್ಮನನ್ನು ಕಳುಹಿಸಿದ ನೆನಪು.
ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು ಅಪ್ಪನ ಹಿಂದೆ ಗಾಡಿ ಏರಿ ಹೊರಟ ನೆನಪು;
ಇಂದು,ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು
ಗಾಡಿ ಏರಲು ಹಿಂದು-ಮುಂದು ನೋಡಿದ ನೆನಪು.
ಸಿಹಿಯಾದ ಬಾಲ್ಯದ ಬೆಳದಿಂಗಳ ನೆನಪು,
ಯೌವ್ವನದ ಅಹಂಕಾರದ ಹರುಪು.
ಸಿಹಿಯಾದ ಬಾಲ್ಯದ
- ವೇಣು ಆರ್ ಚಿನ್ನದೂರು
22 Dec 2016, 06:02 pm
Download App from Playstore: